ಯದುವೀರ್ ಒಡೆಯರ್ ರಾಜಕೀಯಕ್ಕೆ ಎಂಟ್ರಿ : ನಿಜಾನಾ..?

By Web DeskFirst Published Sep 8, 2018, 2:08 PM IST
Highlights

ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ, ರಾಜಕೀಯದಲ್ಲಿ ಆಸಕ್ತಿ ಇಲ್ಲ.  ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು  ಹಾಸನದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.

ಹಾಸನ : ರಾಜಕಾರಣಕ್ಕೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಪ್ರವೇಶ ಮಾಡುತ್ತಾರಾ ಎನ್ನುವ ಸುದ್ದಿ ಇದೀಗ ಹೆಚ್ಚು ಸದ್ದು ಮಾಡುತ್ತಿದ್ದು,  ಇದೇ ವೇಳೆ ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. 

ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ, ರಾಜಕೀಯದಲ್ಲಿ ಆಸಕ್ತಿ ಇಲ್ಲ.  ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು  ಹಾಸನದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದು, ರಾಜಕೀಯ ಸೇರುವ ವದಂತಿ ಕೇವಲ ಊಹಾಪೋಹ ಅಷ್ಟೇ. ಜನ ಸೇವೆ ಮಾಡಲು ರಾಜಕೀಯ ಬಿಟ್ಟು ಬೇರೆ ಕ್ಷೇತ್ರಗಳಿವೆ ಎಂದಿದ್ದಾರೆ. 

ಅಲ್ಲದೇ ಇದೇ ವೇಳೆ ಭಾರೀ ಪ್ರವಾಹದಿಂದ ತತ್ತರಿಸಿದ್ದ  ಮಡಿಕೇರಿಗೆ ಶೀಘ್ರದಲ್ಲೇ ಭೇಟಿ ನೀಡುವುದಾಗಿಯೂ ಕೂಡ ಅವರು ಈ ವೇಳೆ ತಿಳಿಸಿದ್ದಾರೆ. 

ಇನ್ನು ರಾಜ ವಂಶಸ್ಥರಿಗೆ ಸರ್ಕಾರದಿಂದ ಗೌರವ ಧನ ನಿಷೇಧಿಸಬೇಕೆಂಬ ನಂಜರಾಜ ಅರಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ವಿಚಾರವು ತಮ್ಮ  ಗಮನಕ್ಕೆ ಬಂದಿಲ್ಲ.  ಮೈಸೂರು ರಾಜಮನೆತನದ ಆಡಳಿತ ಮಂಡಳಿ ನೋಡಿಕೊಳ್ಳಲಿದೆ ಎಂದು ಒಡೆಯರ್ ಹೇಳಿದ್ದಾರೆ.

click me!