
ನವದೆಹಲಿ: ‘ಜ್ಯೋತಿಷ್ಯ ಆಧರಿಸಿ’ ಅವಧಿಪೂರ್ವ ಚುನಾವಣೆ ನಡೆಸುವ ನಿರ್ಧಾರ ಹಾಗೂ ‘ಅಕ್ಟೋಬರ್ ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿ ನವೆಂಬರ್ ವೇಳೆ ಚುನಾವಣೆ ಪ್ರಕ್ರಿಯೆ ಮುಗಿದು, ಡಿಸೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಬಹುದು’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತೆಲಂಗಾಣದ ನಿರ್ಗಮಿತ ಸಿಎಂ ಕೆ. ಚಂದ್ರಶೇಖರರಾವ್ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಕಿಡಿಕಾರಿದ್ದಾರೆ.
‘ರಾವ್ ಅವರ ಹೇಳಿಕೆಗಳು ಅಸಮಂಜಸ ಹಾಗೂ ಅನಪೇಕ್ಷಿತ. ಜ್ಯೋತಿಷ್ಯ ಆಧರಿಸಿ ನಾವು ಚುನಾವಣೆ ನಡೆಸೋಕಾಗಲ್ಲ. ವಸ್ತುಸ್ಥಿತಿ ಪರಿಶೀಲಿಸಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ರಾಜಸ್ಥಾನಚುನಾವಣೆಯ ಜತೆಗೆ ಇಲ್ಲೂ ಚುನಾವಣೆ ನಡೆಸಬಹುದೇ ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ರಾವತ್ ಶುಕ್ರವಾರ ಅತೃಪ್ತಿ ಹೊರಹಾಕಿದರು.
ಆದರೆ ಉಸ್ತುವಾರಿ ಸರ್ಕಾರವು ಪರಿಸ್ಥಿತಿಯ ಲಾಭ ಪಡೆಯದಂತಾಗಲು ತಡ ಮಾಡದಂತೆ ಚುನಾವಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.