ನಾನು ಬಡವ ಎಂದು ಗೋಡೆಮೇಲೆ ಬರೆಸಿದರಷ್ಟೇ ರೇಷನ್!

By Suvarna Web DeskFirst Published Jun 23, 2017, 9:34 AM IST
Highlights

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುವ ಬಡವರ ಮನೆಯ ಗೋಡೆ ಮೇಲೆ ‘ನಾನು ಬಡವ. ಆಹಾರ ಭದ್ರತಾ ಕಾಯ್ದೆಯಡಿ ನಾನು ಪಡಿತರ ಪಡೆಯುತ್ತೇನೆ' ಎಂದು ರಾಜಸ್ಥಾನ ಸರ್ಕಾರ ಬಣ್ಣದಲ್ಲಿ ಬರೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ(ಜೂ.23): ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುವ ಬಡವರ ಮನೆಯ ಗೋಡೆ ಮೇಲೆ ‘ನಾನು ಬಡವ. ಆಹಾರ ಭದ್ರತಾ ಕಾಯ್ದೆಯಡಿ ನಾನು ಪಡಿತರ ಪಡೆಯುತ್ತೇನೆ' ಎಂದು ರಾಜಸ್ಥಾನ ಸರ್ಕಾರ ಬಣ್ಣದಲ್ಲಿ ಬರೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ರಾಜಸ್ಥಾನದ ದೌಸಾ ಜಿಲ್ಲೆಯ ಸಿಕ್ರಾಯ್‌ ಹಾಗೂ ಬಂಡಿಕುಯಿ ತಾಲೂಕಿನ 50 ಸಾವಿರ ಮನೆಗಳ ಗೋಡೆಗಳ ಮೇಲೆ ಈ ರೀತಿ ಬರೆಸಲಾಗಿದೆ. ತಮ್ಮ ಮನೆ ಮೇಲೆ ಈ ಸಾಲುಗಳನ್ನು ಬರೆಸಿಕೊಳ್ಳಲು ನಿರಾಕರಿಸುವ ಜನರಿಗೆ ಪಡಿತರ ನಿರಾಕರಿಸಲಾಗುತ್ತಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಬಿಪಿಎಲ್‌ ಹಾಗೂ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವವರನ್ನು ಗುರುತಿಸಲು ಈ ರೀತಿ ಮನೆಗಳ ಮೇಲೆ ಬರೆಸ ಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಇದೆ ಎಂದು ದೌಸಾ ಜಿಲ್ಲಾ ಪಂಚಾಯಿತಿ ಸಿಇಒ ಸುರೇಂದ್ರ ಸಿಂಗ್‌ ತಿಳಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜಸ್ಥಾನದಲ್ಲಿ 10 ಕೆ.ಜಿ. ಗೋಧಿ ನೀಡಲಾಗುತ್ತದೆ.

‘ನಾನು ಬಡವ..' ಎಂದು ಮನೆ ಮೇಲೆ ಬರೆಸಿಕೊಂಡರೂ ತಮಗೆ ಪಡಿತರ ದೊರೆಯುತ್ತಿಲ್ಲ ಎಂದು ಕೆಲವು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೆ ಬಡವ ಎಂದು ಬರೆಸಿ ಕೊಂಡರೆ 750 ರು. ಕೊಡುವುದಾಗಿ ಹೇಳಿದ್ದರು ಎಂದೂ ಕೆಲವರು ತಿಳಿಸಿದ್ದಾರೆ. ಬಡವ ಎಂದು ಗೋಡೆಯ ಮೇಲೆ ಬರೆಯಬೇಡಿ ಎಂದು ಕೇಳ ದಿದ್ದರೂ, ಸರ್ಕಾರಿ ಸಿಬ್ಬಂದಿ ಬರೆದು ಹೋಗಿ ದ್ದಾರೆ. ಇದ

ದ ತಮಗೆ ಅವಮಾನವಾಗುತ್ತಿದೆ. ಸರ್ಕಾರ ತಮಾಷೆ ಮಾಡುತ್ತಿದೆ ಎಂದು ಗ್ರಾಮ ಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರನ್ನು ಈ ರೀತಿ ಗುರುತಿಸುವ ಕಾರ್ಯವನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರವೇ ಪ್ರಾರಂಭಿಸಿತ್ತು. ಆದರೆ ಈಗ ಆ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ರಾಜಸ್ಥಾನದ ಪಂಚಾಯತ್‌ ರಾಜ್‌ ಸಚಿವ ರಾಜೇಂದ್ರ ಸಿಂಗ್‌ ರಾಥೋರ್‌ ಟೀಕಿಸಿದ್ದಾರೆ.

click me!