‘ಹಸಿರು ಮೆಟ್ರೋ'ಗೆ ಮೂಲಸೌಕರ್ಯ ಕಪ್ಪು ಚುಕ್ಕೆ

By Suvarna Web DeskFirst Published Jun 23, 2017, 9:20 AM IST
Highlights

ಯಲಚೇನಹಳ್ಳಿ ಮತ್ತು ನಾಗಸಂದ್ರ ನಡುವಿನ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿನ ಹಸಿರು ರೈಲು ಆರಂಭಗೊಂಡು ಎರಡೇ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಎರಡರಷ್ಟಾಗಿದೆ. ಆದರೆ, ನಿಲ್ದಾಣ ಇಳಿದ ಬಳಿಕ ಮುಂದಿನ ಪ್ರಯಾಣ ಮಾತ್ರ ಸುಖಕರ ಪ್ರಯಾಣದಂತಿಲ್ಲ. ಮೆಟ್ರೋ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ ತೀವ್ರವಾಗಿ ಕಾಡುತ್ತಿದೆ.

ಬೆಂಗಳೂರು(ಜೂ.23): ಯಲಚೇನಹಳ್ಳಿ ಮತ್ತು ನಾಗಸಂದ್ರ ನಡುವಿನ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿನ ಹಸಿರು ರೈಲು ಆರಂಭಗೊಂಡು ಎರಡೇ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಎರಡರಷ್ಟಾಗಿದೆ. ಆದರೆ, ನಿಲ್ದಾಣ ಇಳಿದ ಬಳಿಕ ಮುಂದಿನ ಪ್ರಯಾಣ ಮಾತ್ರ ಸುಖಕರ ಪ್ರಯಾಣದಂತಿಲ್ಲ. ಮೆಟ್ರೋ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ ತೀವ್ರವಾಗಿ ಕಾಡುತ್ತಿದೆ.

ಮೆಟ್ರೋ ನಿಲ್ದಾಣದಿಂದ ಹೊರಗೆ ಬಂದೊಡನೆ ಎಲ್ಲಿಗೆ ಹೋಗಬೇಕು?. ಎಲ್ಲಿ ಬಸ್‌ ಹತ್ತಬೇಕು?. ರಿಕ್ಷಾ, ಆಟೋ ಟ್ಯಾಕ್ಸಿ ಬೇಕಾದಲ್ಲಿ ಎಲ್ಲಿಗೆ ಹೋಗಬೇಕು? ಎಂದು ಗಲಿಬಿಲಿಗೊಳ್ಳುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಪಾರ್ಕಿಂಗ್‌ ಪ್ರದೇಶದಿಂದ ತಮ್ಮ ವಾಹನವನ್ನು ಮುಖ್ಯ ರಸ್ತೆಗೆ ತರಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಬಿಎಂಟಿಸಿ ವೆÜುಟ್ರೋ ಫೀಡರ್‌ ಬಸ್‌ಗಳನ್ನು ಹಾಕಿದ್ದರೂ ಈ ಫೀಡರ್‌ ಬಸ್‌ಗಳು ನಿಲ್ಲಲೂ ನಿಲ್ದಾಣದ ಮುಂದೆ ಸ್ಥಳ ಇಲ್ಲ. ಮುಖ್ಯರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕಿದೆ. ಇದರಿಂದ ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

ಎಲ್ಲಿಗೆ ಪಯಣ..ಯಾವುದೋ ದಾರಿ..: ಕೆಂಪೇಗೌಡ ನಿಲ್ದಾಣದಲ್ಲಂತೂ ಪ್ರಯಾಣಿಕರ ಗೊಂದಲದಿಂದಾಗಿ ಅಲ್ಲಿನ ಸಿಬ್ಬಂದಿ ಹೈರಾಣಾಗಿದ್ದಾರೆ. ಸಾಕಷ್ಟುಮಾಹಿತಿ ಫಲಕ, ಸೂಚನಾ ಫಲಕ, ಮಾರ್ಗ ಸೂಚಿ ಇದ್ದರೂ ಜನರು ಗೊಂದಲಕ್ಕೀಡಾಗುತ್ತಿದ್ದಾರೆ. ಶಿಕ್ಷಿತರು ಕೂಡ ದಾರಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಲಚೇನಹಳ್ಳಿ ಪ್ಲಾಟ್‌ಫಾರಂ 4, ನಾಗಸಂದ್ರ ಪ್ಲಾಟ್‌ಫಾರಂ 3, ‘ಯಲಚೇನಹಳ್ಳಿ ಕಡೆಗೆ' ‘ನಾಗಸಂದ್ರ ಕಡೆಗೆ' ಎಂಬ ಫಲಕಗಳು ಕಾಣುತ್ತವೆ. ಆದರೆ ಯಲಚೇನಹಳ್ಳಿ ಮಾರ್ಗದಲ್ಲಿ ಚಿಕ್ಕಪೇಟೆ, ಕೆ.ಆರ್‌.ಮಾರ್ಕೆಟ್‌, ನ್ಯಾಷನಲ್‌ ಕಾಲೇಜು ಮೊದಲಾದ ನಿಲ್ದಾಣಗಳಿವೆ ಎಂಬ ಕುರಿತಾದ ವಿವರಗಳಿಲ್ಲ. ಹೀಗಾಗಿ ಪ್ರಯಾಣಿಕರು ಈ ರೈಲು ಎಲ್ಲೆಲ್ಲಿ ಹೋಗುತ್ತದೆ ಎಂಬುದನ್ನು ಅರಿತುಕೊಳ್ಳುವಷ್ಟರಲ್ಲಿ ಎರಡು ರೈಲು ನಿಲ್ದಾಣ ಬಿಟ್ಟಿರುತ್ತದೆ. ಪ್ಲಾಟ್‌ಫಾರಂಗಳಲ್ಲಿ ಆ ಮಾರ್ಗದ ನಿಲ್ದಾಣಗಳ ದೊಡ್ಡ ಫಲಕ ಅಳವಡಿಸುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

 

click me!