ಬೆಂಗಳೂರು[ಜು. 15] ಮಾಧ್ಯಮಗಳ ಕಣ್ಣು ತಪ್ಪಿಸಲು ಬನ್ನೆರುಘಟ್ಟ ರಸ್ತೆ ಬಳಿ ಕಾರ್ಯಕರ್ತರ ಮನೆಗೆ ರಾಜೀನಾಮೆ ಕೊಟ್ಟ ಶಾಸಕ ರಾಮಲಿಂಗಾರೆಡ್ಡಿ ಕಾರ್ಯಕರ್ತರ ಮನೆಗೆ ತೆರಳಿದ್ದಾರೆ. ತೆರಳುವಾಗ ರೆಡ್ಡಿ ತಮ್ಮ ಕಾರನ್ನು ಪದೇ ಪದೇ ನಿಲ್ಲಿಸಿ ತೆರಳಿದರು.
ಕೋರಮಂಗಲ ಆರ್.ಜೆ.ಎಸ್ ಡಿಗ್ರಿ ಕಾಲೇಜ್ ಬಳಿ ಕಾರು ಬದಲಿಸಿ ತೆರಳಿದ ರಾಮಲಿಂಗಾರೆಡ್ಡಿ ತೆರಳಿದರು. ರೆಡ್ಡಿ ಹಿಂದಿನ ಮೂರು ಕಾರುಗಳು ಮೂರು ದಿಕ್ಕಿಗೆ ತೆರಳಿ ಸಿನಿಮಾದ ಅನುಭವ ನೀಡಿತ್ತು. ಮಾಧ್ಯಮಗಳ ಕಣ್ಣು ತಪ್ಪಿಸಲು ಮೂರು ದಿಕ್ಕಿಗೂ ಒಂದೊಂದು ಗಾಡಿ ತೆರಳುವಂತೆ ರೆಡ್ಡಿ ಸೂಚಿಸಿದರು.
ಮಾಧ್ಯಮಗಳ ಕಣ್ತಪ್ಪಿಸಲು ಇನೋವಾ ಕಾರಿಂದ ಇಳಿದು ವೈಟ್ ಕಲರ್ ರೇಂಜ್ ರೋವರ್ ಕಾರು ಹತ್ತಿದ ರಾಮಲಿಂಗಾರೆಡ್ಡಿ ತೆರಳಿದರು. ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗ್ತಾ ಇದ್ದೇನೆ ಎಂದು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಸುತ್ತಿದ್ದಾರೆ.ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕಪೋಲಕಲ್ಪಿತ. ಮಾಧ್ಯಮ ಸ್ನೇಹಿತರು ಯಾರೋ ಹಬ್ಬಿಸುವ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ರೆಡ್ಡಿ ಮನವಿ ಮಾಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.