
ದುಬೈ[ಆ.05]: ದುಬೈನಲ್ಲಿ ಉದ್ಯೋಗ ಹುಡುಕಲು ವಿಫಲನಾಗಿ ನಿರಾಶೆಯಿಂದ ಮನೆಗೆ ಮರಳಿದ್ದ ಭಾರತೀಯ ರೈತನೊಬ್ಬ ದುಬೈನಲ್ಲಿ ಬರೋಬ್ಬರಿ 27 ಕೋಟಿ ರು.ನ ಲಾಟರಿ ಗೆದ್ದುಕೊಂಡಿದ್ದಾನೆ.
ಹೈದರಾಬಾದ್ ನಿವಾಸಿಯಾದ ವಿಲಾಸ್ ರಿಕ್ಕಾಲಾ ಎನ್ನುವವರು ದುಬೈನಿಂದ ನಾಲ್ಕು ದಿನಗಳ ಹಿಂದೆ ತವರಿಗೆ ಮರಳಿದ್ದರು. ಉದ್ಯೋಗ ಹುಡುಕಲು ವಿಫಲವಾಗಿದ್ದರಿಂದ ಪತ್ನಿಯಿಂದ 20 ಸಾವಿರ ರು. ಪಡೆದು ಸ್ನೇಹಿತ ರವಿ ಎಂಬಾತನಿಗೆ ನೀಡಿದ್ದರು.
ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ರವಿ, ರಿಕ್ಕಾಲಾ ಹೆಸರಿನಲ್ಲಿ ಮೂರು ಲಾಟರಿ ಟಿಕೆಟ್‌ಗಳನ್ನು ಪಡೆದಿದ್ದ. ಶನಿವಾರದಂದು ಲಾಟರಿ ಗೆದ್ದಿರುವ ಬಗ್ಗೆ ಯುಎಇಯ ಬಿಗ್ ಟಿಕೆಟ್ ಲಾಟರಿ ಸಂಸ್ಥೆ ರಿಕ್ಕಾಲಾಗೆ ಮಾಹಿತಿ ನೀಡಿದೆ.ಈ ಹಿಂದೆ ದುಬೈನಲ್ಲಿ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ ರಿಕ್ಕಾಲಾ ಎರಡು ವರ್ಷಗಳ ಕಾಲ ವಿವಿಧ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಆದರೆ, ಒಮ್ಮೆಯೂ ಅದೃಷ್ಟ ಒಲಿದಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.