ಅನಾಥ ಮಗುವಿಗೆ ಮಹಿಳಾ ಪೇದೆ ಎದೆಹಾಲು!

Published : Jan 02, 2019, 10:37 AM ISTUpdated : Jan 02, 2019, 01:03 PM IST
ಅನಾಥ ಮಗುವಿಗೆ ಮಹಿಳಾ ಪೇದೆ ಎದೆಹಾಲು!

ಸಾರಾಂಶ

ಹೈದರಾಬಾದ್‌ನಲ್ಲಿ ಮಹಿಳಾ ಪೇದೆಯೊಬ್ಬ ಅನಾಥ ಮಗುವೊಂದಕ್ಕೆ ಎದೆಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.

ಹೈದರಾಬಾದ್[ಡಿ.02]: ಅನಾಥ ಮಗುವೊಂದಕ್ಕೆ ಬೆಂಗಳೂರಿನ ಮಹಿಳಾ ಪೇದೆಯೊಬ್ಬರು ಎದೆಹಾಲು ಕುಡಿಸಿದ ಘಟನೆಯ ಮಾದರಿಯಲ್ಲೇ ಹೈದರಾಬಾದ್‌ನಲ್ಲಿ ಮಹಿಳಾ ಪೇದೆಯೊಬ್ಬರು ಇಂಥದ್ದೇ ಮಾನವೀಯತೆ ಮೆರೆದಿದ್ದಾರೆ.

ಕುಡಿದ ಮತ್ತಿನಲ್ಲಿ ತಾಯಿಯೊಬ್ಬಳು ತನ್ನ 18 ತಿಂಗಳ ಕಂದನನ್ನು ಬಿಟ್ಟು ಹೋಗಿದ್ದಳು. ಬಳಿಕ ಮಗು ವಿಪರೀತ ಅಳುತ್ತಿತ್ತು. ಹೆರಿಗೆ ರಜೆಯ ಮೇಲಿದ್ದ ಮಹಿಳಾ ಪೇದೆ ಪ್ರಿಯಾಂಕಾಗೆ ಅದೇ ಫ್ಜಲ್‌ಗಂಜ್‌ ಠಾಣೆಯಲ್ಲಿ ಪೇದೆಯಾಗಿರುವ ಪತಿಯು ಈ ವಿಷಯ ತಿಳಿಸಿದರು.

ಪ್ರಿಯಾಂಕಾ ಕೂಡಲೇ ಮನೆಯಿಂದ ಬಂದು ಅಳುತ್ತಿದ್ದ ಮಗುವಿನ ನೋವನ್ನು ಅರ್ಥ ಮಾಡಿಕೊಂಡು ಎದೆಹಾಲು ಕುಡಿಸಿ ಶಾಂತ ಮಾಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜನರ ನಂಬಿಕೆ ಉಳಿಸಿ, ತಪ್ಪು ನಡೆದಿಲ್ಲವೆಂದು ದೃಢಪಡಿಸಿ, ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಲಹೆ!
ಈ ದೇಶಗಳಲ್ಲಿ 1 ಲೀಟರ್‌ ಪೆಟ್ರೋಲ್‌ಗೆ ಕೇವಲ ₹2! ಯಾವ ದೇಶದಲ್ಲಿ ಅತ್ಯಂತ ದುಬಾರಿ?