ರಾಸಲೀಲೆ ನಡೆದಿದ್ದು ಯಾವಾಗ? ಪ್ರಕರಣದ ಮಾಸ್ಟರ್ ಮೈಂಡ್ ಯಾರು ಗೊತ್ತಾ ?

By Suvarna Web DeskFirst Published Dec 11, 2016, 8:37 AM IST
Highlights

. ಅನಂತರ ಶೆಟ್ಟಿ ಮೇಟಿಯವರಿಂದ ಐಶಾರಾಮಿ ಕಾರು ಕೇಳಿದ್ದ. ಆದರೆ ಮೇಟಿಯವರು ನಿರಾಕರಿಸಿದ್ದರು

Click Here: ಅಮ್ಮನ ನಂತರ ಶುರುವಾಗಿದೆ ತಮಿಳುನಾಡಿನಲ್ಲಿ ರಜಿನಿಯ ಹವಾ: ಬೆಚ್ಚಿರುವ ಶಶಿಕಲಾ, ಕಂಗಾಲಾದ ಡಿಎಂಕೆ ನಾಯಕರು

ಬೆಂಗಳೂರು(ಡಿ.11): ಅಬಕಾರಿ ಸಚಿವ ಹೆಚ್.ವೈ ಮೇಟಿಯವರ ರಾಸಲೀಲೆ ಹಾಗೂ ಆರ್ಟಿಐ ಕಾರ್ಯಕರ್ತನಿಗೆ  ಬೆದರಿಕೆ ಆರೋಪ ಈಗ ಜಗಜ್ಜಾಹಿರವಾಗಿದೆ.ಸ್ವಲ್ಪ ವಿಷಯವನ್ನು ಕದಕುತ್ತಾ ಹೋದಾಗ ರಾಸಲೀಲೆ ಪ್ರಕರಣ ನಡೆದಿದ್ದು ಯಾವಾಗ ಹಾಗೂ ಪ್ರಕರಣ ಬೆಳಕಿಗೆ ಬರಲು ಇದರ ಹಿಂದಿರುವ ಸೂತ್ರಧಾರ ಬೇರೆಯವರೆ ಇದ್ದಾರೆ ಎಂಬ ಸಂಗತಿಗಳು ಗೋಚರವಾಗಿದೆ.

ಈ ಘಟನೆ ನಡೆದಿದ್ದು ಮೂರ್ನಾಲ್ಕು ತಿಂಗಳ ಹಿಂದೆಯೇ ಹಾಗೂ ಸಿಡಿ ಕೂಡ 3 ತಿಂಗಳ ಹಿಂದೆಯೇ ರೆಡಿಯಾಗಿತ್ತು ಎನ್ನಲಾಗಿದೆ. ಈ ಸಂಪೂರ್ಣ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ಮೇಟಿಯವರ ಪಿಎ ಶಿವಾನಂದ ಶೆಟ್ಟಿ. ಮೇಟಿಯವರು ಕಳೆದ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಶಿವಾನಂದ ಶೆಟ್ಟಿ ಪ್ರಮುಖ ಕಾರಣವಾಗಿದ್ದ. ಅನಂತರ ಶೆಟ್ಟಿ ಮೇಟಿಯವರಿಂದ ಐಶಾರಾಮಿ ಕಾರು ಕೇಳಿದ್ದ. ಆದರೆ ಮೇಟಿಯವರು ನಿರಾಕರಿಸಿದ್ದರು. ಅಂದಿನಿಂದ ಶಿವಾನಂದ ಸಚಿವರ ಸಚಿವರ ಜೊತೆಯಲ್ಲೇ ಇದ್ದರೂ ಮನಸ್ಸಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ.

ಇಲಾಖೆಗೆ ಸಂಬಂಧಿಸಿದ ಎಲ್ಲ ಕಡತಗಳಿಗೂ ಸಹಿ ಹಾಕುವುದಷ್ಟೆ ಮೇಟಿಯವರ ಕೆಲಸವಾಗಿತ್ತು. ಉಳಿದ ವ್ಯವಹಾರವನ್ನು ಆಪ್ತ ಸಹಾಯಕ ಶಿವಾನಂದನೇ ನೋಡಿಕೊಳ್ಳುತ್ತಿದ್ದ. ರಾಸಲೀಲೆಯ ಆರೋಪ ಹೊರಿಸುತ್ತಿರುವ ಮಹಿಳೆಯನ್ನು ಸಚಿವರ ಬಳಿ ಕಳಿಸಿದ್ದೇ ಶಿವಾನಂದ ಎನ್ನಲಾಗಿದ್ದು, ಅಸಭ್ಯ ಘಟನೆ ನಡೆದ ನಂತರ ಆ ಮಹಿಳೆಯು ಸಚಿವರೊಂದಿಗೆ 15 ಕೋಟಿಯ ಡೀಲಿಂಗ್ ಇಳಿದು ಹಣವನ್ನು ನೀಡದಿದ್ದರೆ ಮಾಧ್ಯಮಗಳಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಳು. ಸಚಿವರು 10 ಹಾಗೂ 15 ಲಕ್ಷಕ್ಕೆ ಚೌಕಾಸಿ ನಡೆಸಿದ್ದರು. ಆದರೆ ಆ ಮಹಿಳೆ ಚೌಕಾಸಿಗೆ ಒಪ್ಪದ ಕಾರಣ ವಿಷಯ ಎಲ್ಲಡೆ ಬಹಿರಂಗವಾಗಿದೆ ಎನ್ನಲಾಗಿದೆ.

 

click me!