
ನವದೆಹಲಿ(ಡಿ. 11): ದೇಶದಲ್ಲಿ ಕ್ಯಾಷ್'ಲೆಸ್ ವಹಿವಾಟು ಸಂಸ್ಕೃತಿಯನ್ನು ಪಸರಿಸಲು ನೀತಿ ಆಯೋಗ ಹೊಸ ತಂತ್ರ ಹೂಡಿದೆ. ಕಾರ್ಡ್ ಮತ್ತು ಆನ್'ಲೈನ್ ಮೂಲಕ ಹಣ ಪಾವತಿ ಮಾಡುವವರಿಗೆ ಡ್ರಾ ಮೂಲಕ ಬಹುಮಾನ ನೀಡುವ ಚಿಂತನೆ ನಡೆದಿದೆ. ಗ್ರಾಮೀಣ ಭಾಗದ ಜನರು ಹಾಗೂ ಸಣ್ಣ ಪಟ್ಟಣಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ.
ಕೇಂದ್ರದ ಮೂಲಗಳ ಪ್ರಕಾರ, ಈ ಬಹುಮಾನಗಳಿಗೆಂದೇ ರಾಷ್ಟ್ರೀಯ ಹಣಕಾಸು ಸೇರ್ಪಡೆ ನಿಧಿ(ನ್ಯಾಷನಲ್ ಫೈನಾನ್ಷಿಯಲ್ ಇನ್'ಕ್ಲೂಷನ್ ಫಂಡ್)ಗೆ 125 ಕೋಟಿ ರೂಗಳನ್ನು ಎತ್ತಿಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್'ಪಿಸಿಐ) ಸಂಸ್ಥೆಗೆ ಯೋಜನೆ ರೂಪಿಸುವ ಜವಾಬ್ದಾರಿ ನೀಡಲಾಗುತ್ತಿದೆ. ಯಾವ ರೀತಿಯಲ್ಲಿ ಬಹುಮಾನ ನೀಡಬೇಕೆಂಬುದನ್ನು ಎನ್'ಪಿಸಿಐ ನಿರ್ಧರಿಸಲಿದೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಮೂರು ತಿಂಗಳಿಗೊಮ್ಮೆ 1 ಕೋಟಿ ರೂಪಾಯಿ ಬಂಪರ್ ಬಹುಮಾನ ನೀಡಲಾಗುತ್ತದೆ. ಜೊತೆಗೆ, ಪ್ರತೀ ವಾರ 20 ಮಂದಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವ ಚಿಂತನೆ ಇದೆ. ಈ 20 ಮಂದಿಯಲ್ಲಿ 10 ಮಂದಿಯು ಗ್ರಾಹಕರಾದರೆ, ಇನ್ನುಳಿದ 10 ಜನರು ವ್ಯಾಪಾರಸ್ಥರಾಗಿರುತ್ತಾರೆನ್ನಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಈ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.