ಕಳಚಿತು ಸುಳ್ಳು ಬ್ರಾಹ್ಮಣನ ಬ್ರಾಹ್ಮಣ್ಯ: ಪತ್ನಿ ದೂರು ಮಾಡ್ಬೇಡಿ ನಗಣ್ಯ!

By Web DeskFirst Published Oct 26, 2018, 2:02 PM IST
Highlights

ಗಂಡನ ಸುಳ್ಳು ಬ್ರಾಹ್ಮಣ್ಯದ ವಿರುದ್ಧ ಇದೀಗ ಮಹಿಳೆಯೋರ್ವರು ದೂರು ನೀಡಿದ್ದಾರೆ. ಮದುವೆಯಾಗುವಾಗ ಬ್ರಾಹ್ಮಣ ಎಂದು ಹೇಳಿದ್ದು ನಂತರ ಆತ ಬ್ರಾಹ್ಮಣನಲ್ಲ ಎಂದು ತಿಳಿದು ಬಂದ ನಿಟ್ಟಿನಲ್ಲಿ ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಹಮದಬಾದ್ : 23 ವರ್ಷದ ಮಹಿಳೆಯೋರ್ವರು ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರು ಠಾಣೆ ಮೆಟ್ಟಿಲೇರಲು ಕಾರಣವಾಗಿದ್ದು ಗಂಡನ ಜಾತಿ. 

ಮದುವೆಯಾಗುವಾಗ ಗಂಡ ತನ್ನ ಜಾತಿಯನ್ನು ಗುಟ್ಟಾಗಿ ಇಟ್ಟು ವಿವಾಹವಾಗಿದ್ದಾಗಿ ದೂರು ನೀಡಿದ್ದಾರೆ. ಬ್ರಾಹ್ಮಣ ಎಂದು ಸುಳ್ಳು ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. 

ಏಕ್ತಾ ಪಟೇಲ್ ಎನ್ನುವ ಈಕೆ ಮೇಹಸ್ನಾ ಪ್ರದೇಶದವರಾಗಿದ್ದು ಕಳೆದ ಏಪ್ರಿಲ್ ತಿಂಗಳಲ್ಲಿ ವಿವಾಹವಾಗಿತ್ತು. ವಿವಾಹವಾದ ವ್ಯಕ್ತಿಯ ಸರ್ ನೇಮ್ ಮೆಹ್ತಾ ಎಂದಿತ್ತು. ಆದರೆ ಇದೀಗ ಆತ ಬ್ರಾಹ್ಮಣ ಅಲ್ಲ ಎಂದು ತಿಳಿದು ಬಂದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ತಮ್ಮ ಶಿಕ್ಷಣ ಪೂರೈಸಿದ ಬಳಿಕ ಕುಟುಂಬದ ನಿರ್ವಹಣೆಗಾಗಿ ಕೆಲಸ ಮಾಡುವುದು ಅಗತ್ಯವಾಗಿತ್ತು. ಈ ವೇಳೆ ಗ್ಯಾಸ್ ಏಜೆನ್ಸಿಯೊಂದರಲ್ಲಿ ತಾವು ಕೆಲಸಕ್ಕೆ ಸೇರಿಕೊಂಡಿದ್ದು, ಅದರ ಮಾಲಿಕನ ಮಗ ತಾವು ಬ್ರಾಹ್ಮಣ ಎಂದು ಹೇಳಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾದೆವು. ಆದರೆ ವಿವಾಹದ ಬಳಿಕ ಆತ ಬ್ರಾಹ್ಮಣ ಅಲ್ಲ ಎಂದು ತಿಳಿದು ಬಂದಿದೆ ಎಂದು ದೂರು ನೀಡಿದ್ದಾರೆ. 

click me!