
ನವದೆಹಲಿ [ಅ.28]: ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅತ್ಯಂತ ಕ್ಲಿಷ್ಟವಾಗುತ್ತಿವೆ. ಇದಕ್ಕೆ ಉದಾಹರಣೆ ಎನ್ನುವಂತೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಘಟನೆಯೊಂದು ನಡೆದಿದೆ.
ಇಲ್ಲಿನ ಕಂಪೀರ್ ಗಂಜ್ ಪ್ರದೇಶದಲ್ಲಿ ಪತಿ ತನಗೆ ಮೊಟ್ಟೆಯನ್ನು ತಂದು ಕೊಡಲಿಲ್ಲ ಎಂದು ಪತ್ನಿ ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಾಳೆ. ನಾಲ್ಕು ವರ್ಷಗಳ ಕಾಲ ಸಂಸಾರ ಮಾಡಿದ ಪತಿಯನ್ನು ಬಿಟ್ಟು ಓಡಿದ್ದಾಳೆ
ಕಾರ್ಮಿಕನಾಗಿರುವ ಪತಿ ನಿತ್ಯ ಮೊಟ್ಟೆ ತರಲಿಲ್ಲ ಎನ್ನುವುದೇ ಆಕೆ ಓಡಿ ಹೋಗಲು ಕಾರಣವಾಗಿದ್ದು, ಪ್ರಿಯಕರನೊಂದಿಗೆ ಪರಾರಿಯಾಗಿ ನಾಲ್ಕು ತಿಂಗಳ ಬಳಿಕ ವಾಪಸಾಗಿದ್ದು ಈ ವೇಳೆ ಪೊಲೀಸರ ಬಳಿ ಮೊಟ್ಟೆ ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ಅಲ್ಲದೇ ಮತ್ತೆ ಆಕೆ ತನ್ನ ಪತಿಯೊಂದಿಗೆ ತೆರಳಲು ನಿರಾಕರಿಸಿದ್ದಾಳೆ.
ಮುಸ್ಲಿಂ ಡೆಲಿವರಿ ಬಾಯ್ ತಂದ ಆಹಾರ ತಿರಸ್ಕರಿಸಿದ ವ್ಯಕ್ತಿ ವಿರುದ್ಧ ದೂರು...
ಕಾರ್ಮಿಕನಾಗಿರುವ ಪತಿಗೆ ನಿತ್ಯ ಮೊಟ್ಟೆಯನ್ನು ತರಲು ಆಗುತ್ತಿರಲಿಲ್ಲ. ಆದರೆ ಆಕೆಗೆ ಮೊಟ್ಟೆ ಎಂದರೆ ಅತ್ಯಂತ ಪ್ರಿಯವಾಗಿದ್ದು, ಇದರ ಉಪಯೋಗ ಪಡೆದುಕೊಂಡ ಲವರ್ ನಿತ್ಯ ಆಕೆಗೆ ಮೊಟ್ಟೆ ತಂದುಕೊಟ್ಟು ಆಕೆಯನ್ನು ಇಂಪ್ರೆಸ್ ಮಾಡಿ ಕರೆದೊಯ್ದಿದ್ದಾನೆ ಎಂದು ಪತಿ ದೂರಿದ್ದಾರೆ. ಮೊಟ್ಟೆಯಿಂದಾಗಿ ಪತಿ ಪತ್ನಿಯರು ದೂರಾಗಿದ್ದಾರೆ.
ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.