ತನ್ನನ್ನೇ ತಾನು ನುಂಗಿದ ಕಾಳಿಂಗ.. ವಿಡಿಯೋ ವೈರಲ್

By Web DeskFirst Published Aug 15, 2019, 12:03 AM IST
Highlights

ಈ ಹಾವಿಗೆ ಅದು ಎಷ್ಟೊಂದು ಹಸಿವಾಗಿತ್ತೋ ಗೊತ್ತಿಲ್ಲ.. ತನ್ನನ್ನೆ ತಾನು ತಾನೇ ತಿನ್ನಲು ಪ್ರಯಯತ್ನಿಸಿದೆ.  ಇದು ಆಶ್ಚರ್ಯವಾದರೂ ಸತ್ಯ.  ಈಶಾನ್ಯ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದ ಪ್ರಕರಣವೊಂದು ಹಸಿವಿನ ಕತೆ ಹೇಳುವುದರೊಂದಿಗೆ ಹಲವಾರು ಸಂಶೋಧನಾತ್ಮಕ ಅಂಶಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ.

ಪೆನ್ಸಿಲ್ವೇನಿಯಾ[ಆ. 14] ಕೆಲ ಹಾವುಗಳು, ಮೀನು ಸೇರಿದಂತೆ ಅನೇಕ ಪ್ರಾಣಿ ಮತ್ತು ಸಸ್ತನಿಗಳು  ತಮ್ಮದೇ ಸಮುದಾಯದ  ಚಿಕ್ಕ ಚಿಕ್ಕ ಪ್ರಾಣಿಗಳನ್ನು ಭಕ್ಷಿಸುವುದನ್ನು ಕೇಳಿದ್ದೇವೆ. ಆದರೆ ಈ ಪ್ರಕರಣ ಅದೆಲ್ಲದಕ್ಕಿಂತ ಭಿನ್ನ.. ಇಲ್ಲೊಂದು ಹಾವು ತನ್ನನ್ನು ತಾನೇ ಭಕ್ಷಣೆ ಮಾಡಲು ಮುಂದಾಗಿದೆ.

ಬೇರೆ ಹಾವುಗಳನ್ನು ತಿನ್ನುವ ಹಾವೆಂದು ಗುರುತಿಸಿಕೊಂಡಿರುವ ಕಾಳಿಂಗ ಸರ್ಪ ಒಂದು ಬಾಲದಿಂದ ಶುರು ಮಾಡಿ ತನ್ನ ಶರೀರವನ್ನೇ ತಿನ್ನಲು ಆರಂಭಿಸಿತ್ತು. ಕೆಲವೊಮ್ಮೆ ಈ ಹಾವುಗಳನ್ನು ಅರಿವಿಲ್ಲದೆ ತಮ್ಮ ಬಾಲವನ್ನು ನುಂಗಲು ಆರಂಭಿಸುತ್ತವೆ. ಆದರೆ ಅದು ತನ್ನದೇ ಎಂದು ತಿಳಿದ ಮೇಲೆ ಬಾಲವನ್ನು ಬಿಟ್ಟು ಬಿಡುತ್ತವೆ.

ನದಿಯಲ್ಲಿ ತೇಲಿ ಹೋದ 5 ಮಹಡಿ ಕಟ್ಟಡ: ಅಚ್ಚರಿ ಮೂಡಿಸಿದೆ ವಿಡಿಯೋ!

ಆದರೆ ಈ ಹಾವು ಅದು ತನ್ನದೇ ಬಾಲವೆಂದು ತಿಳಿದ ಮೇಲೂ ಬಿಡಲು ಸುತಾರಾಂ ತಯಾರಿರಲಿಲ್ಲ. ತಪ್ಪಿಸಲು ಯತ್ನಿಸಿದರು ಕೂಡ ಪ್ರಯೋಜನವಾಗಲಿಲ್ಲ. ಏನೇನೋ ಪ್ರಯತ್ನ ಮಾಡಿದರೂ ಎಲ್ಲವೂ ವಿಫಲವಾಗತೊಡಗಿತು. ಕೊನೆಗೆ ಹಾವಿನ ತಲೆಯನ್ನು ಹಿಡಿದು, ಬಾಯಿ ತೆರೆದು ಹರಸಾಹಸ ಮಾಡಿ ಹೊರಗೆ ತೆಗೆಯಲಾಯಿತು. ಆದರೆ ಆ ವೇಳೆಗಾಗಲೇ  ಹಾವು ತನ್ನ ಅರ್ಧ ಶರೀರವನ್ನೇ ನುಂಗಿ ಬಿಟ್ಟಿತ್ತು.

 

click me!