ಕ್ರಾಶ್ ಆದ ಟ್ವಿಟರ್ : ಹಲವು ದೇಶಗಳಲ್ಲಿ ಲಾಗಿನ್'ನಲ್ಲಿ ಸಮಸ್ಯೆ

By Suvarna Web DeskFirst Published Jan 19, 2018, 11:52 AM IST
Highlights

ನಿನ್ನೆ ಸಂಜೆ ಸುಮಾರಿನಲ್ಲಿ ಏಕಕಾಲದಲ್ಲಿ ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಯೂರೋಪ್'ನ ದೇಶಗಳಲ್ಲಿ ಲಾಗಿನ್'ದಾರರು ಆಪ್ ಮೂಲಕ ಅಕೌಂಟ್ ತೆರೆಯಲು ಸಾಧ್ಯವಾಗಲಿಲ್ಲ.

ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಆಪ್'ನಲ್ಲಿ ಕ್ರಾಶ್ ಆದ ಪರಿಣಾಮ ವಿಶ್ವದ ಹಲವು ದೇಶಗಳಲ್ಲಿ ಖಾತಾದಾರರು ಲಾಗಿನ್ ಆಗಲು ಸಮಸ್ಯೆ ಎದುರಿಸಬೇಕಾಯಿತು.

ಕ್ರಾಶ್ ಆದ ಬಗ್ಗೆ ವಿವಿಧ ದೇಶದ ಬಳಕೆದಾರರು ಲಾಗಿನ್ ಆಗುವುದಕ್ಕೆ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಿನ್ನೆ ಸಂಜೆ ಸುಮಾರಿನಲ್ಲಿ ಏಕಕಾಲದಲ್ಲಿ ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಯೂರೋಪ್'ನ ದೇಶಗಳಲ್ಲಿ ಲಾಗಿನ್'ದಾರರು ಆಪ್ ಮೂಲಕ ಅಕೌಂಟ್ ತೆರೆಯಲು ಸಾಧ್ಯವಾಗಲಿಲ್ಲ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕ್ರಾಶ್ ಆಗಿತ್ತು. ಭಾರತ ಹಾಗೂ ಏಷ್ಯಾ ರಾಷ್ಟ್ರಗಳಲ್ಲಿ ಕ್ರಾಶ್ ಆದ ಬಗ್ಗೆ ಯಾವುದೆ ವರದಿಯಾಗಿಲ್ಲ.

click me!