ಧರ್ಮ ಮೀರಿದ ಮಾನವೀಯತೆ: ಅಯೋಧ್ಯೆಯಲ್ಲಿ ಹಿಂದೂಗಳ ಜಾಗ ಮುಸ್ಲಿಮರಿಗೆ!

By Web DeskFirst Published Jun 27, 2019, 4:38 PM IST
Highlights

ಧರ್ಮ ಮೀರಿದ ಮಾನವೀಯತೆ: ಅಯೋಧ್ಯೆಯಲ್ಲಿ ಹಿಂದೂಗಳ ಜಾಗ ಮುಸ್ಲಿಮರಿಗೆ!| ಧರ್ಮಕ್ಕಾಗಿ ಕಿತ್ತಾಡುವವರೆಲ್ಲರಿಗೂ ಮಾನವೀಯತೆಯ ಸಂದೇಶ

ಅಯೋಧ್ಯೆ[ಜೂ.27]: ಅಯೋಧ್ಯೆ ಇವತ್ತಿನವರೆಗೂ ಮಸೀದಿ-ಮಂದಿರದ ತಿಕ್ಕಾಟದಿಂದಲೇ ದೇಶದಾದ್ಯಂತ ಸೌಂಡ್ ಮಾಡಿದೆ. ಆದರೀಗ ಇಲ್ಲಿನ ಹಿಂದೂ-ಮುಸ್ಲಿಂ ಸಹೋದರರ ಮಾನವೀಯ ನಡೆಯೊಂದು ಧರ್ಮಕ್ಕಾಗಿ ಕಿತ್ತಾಡುವವರನ್ನು ತಲೆ ತಗ್ಗಿಸುವಂತೆ ಮಾಡಿದೆ. 

ಇಲ್ಲಿನ ಗೋಸಾಯಿಗಂಜ್ ನ ಬೆಲ್ವಾರಿ ಖಾನ್ ಪ್ರದೇಶದ ಹಿಂದೂಗಳು ಮುಸಲ್ಮಾನರ ಕಬ್ರಿಸ್ತಾನಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ. ಭೂಮಿ ದಾನ ಮಾಡಿರುವ ರೀಪ್ ದಾಂದ್ ಮಹಾಜನ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಗೋಸಾಯಿಗಂಜ್ ನಗರ ಹಾಗೂ ಆಸುಪಾಸಿನ ಮುಸಲ್ಮಾನರು ಈ ಭೂಮಿಯನ್ನು ನೂರಾರು ವರ್ಷಗಳಿಂದ ಈ ಭೂಮಿಯನ್ನು ಕಬ್ರಿಸ್ತಾನವನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಮಾಲೀಕತ್ವ ಯಾರಿಗೆ ಎಂಬ ವಿಚಾರದಿಂದ ಎರಡೂ ಸಮುದಾಯಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಆದರೀಗ ಈ ವಿವಾದಕ್ಕೆ ಪೂರ್ಣವಿರಾಮ ಇಡುವ ಸಲುವಾಗಿ ಈ ಭೂಮಿಯನ್ನು ಮುಸಲ್ಮಾನರಿಗೆ ನೀಡಿದೆ' ಎಂದಿದ್ದಾರೆ.

ಪೂರ್ವಜರಿಂದ ಸಿಕ್ಕ ಈ ಭೂಮಿ ವಿಚಾರವಾಗಿ ದೀರ್ಘ ಕಾಲದಿಂದ ನಡೆರಯುತ್ತಿರುವ ಈ ವಿವಾದಕ್ಕೆ ತೆರೆ ಎಳೆಯುವ ಸಲುವಾಗಿ ನ್ಯಾಯಾಲಯದಲ್ಲಿ ಈ ಭೂಮಿಯನ್ನು ಮುಸಲ್ಮಾನರಿಗೆ ಬಿಟ್ಟುಕೊಟ್ಟಿದ್ದೇವೆ' ಎಂದಿದ್ದಾರೆ.

ಹಿಂದೂಗಳ ಈ ನಡೆಯನ್ನು ಶ್ಲಾಘಿಸಿರುವ ಮುಸಲ್ಮಾನ ಸಮುದಾಯದವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಇದು ಮುಸಲ್ಮಾನರ ಮೇಲೆ ಹಿಂದೂಗಳು ತೋರಿಸಿರುವ ಪ್ರೀತಿಯ ಉದಾಹರಣೆ. ಈ ಸೌಹಾರ್ದತೆ ಯಾವತ್ತಿಗೂ ಉಳಿಯಲಿದೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

click me!