ಮೊದಲೇ ಬರಗಾಲ. ಕುಡಿಯುವ ನೀರಿಗೂ ಹಾಹಾಕಾರ. ಇಂತಹ ಭೀಕರ ಬರ ಪರಿಸ್ಥಿತಿಯಲ್ಲಿ ಗದಗದ ಮಲಪ್ರಭ ಬಲದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಗದಗ ಜಿಲ್ಲೆ ಬಳಗಾನೂರು ಸಮೀಪವಿರುವ ಮಲಪ್ರಭ ಬಲದಂಡೆಯಿಂದ ಅಪಾರ ಪ್ರಮಾಣದ ನೀರು ಪೋಲಾಗಿ ಹರಿದಿದೆ.
ಗದಗ (ಏ.04): ಮೊದಲೇ ಬರಗಾಲ. ಕುಡಿಯುವ ನೀರಿಗೂ ಹಾಹಾಕಾರ. ಇಂತಹ ಭೀಕರ ಬರ ಪರಿಸ್ಥಿತಿಯಲ್ಲಿ ಗದಗದ ಮಲಪ್ರಭ ಬಲದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಗದಗ ಜಿಲ್ಲೆ ಬಳಗಾನೂರು ಸಮೀಪವಿರುವ ಮಲಪ್ರಭ ಬಲದಂಡೆಯಿಂದ ಅಪಾರ ಪ್ರಮಾಣದ ನೀರು ಪೋಲಾಗಿ ಹರಿದಿದೆ.
ಕಳೆದ 2 ತಿಂಗಳ ಹಿಂದೆಯೂ ಕಾಲುವೆ ಒಡೆದು 800 ಕ್ಯೂಸೆಕ್ಸ್ ನೀರು ಪೋಲಾಗಿತ್ತು. ಕಳಪೆ ಕಾಮಗಾರಿಯಿಂದ ದುರಸ್ತಿ ಮಾಡಿರೋದೆ ಪದೇ ಪದೇ ಕಾಲುವೆ ಒಡೆದು ನೀರು ಪೋಲಾಗ್ತಿರೋದೆ ಕಾರಣ ಎನ್ನೋ ಆರೋಪ ಕೇಳಿಬಂದಿದೆ. ಇವತ್ತು ಕಾಲುವೆ ಒಡೆದು ಸುಮಾರು 350 ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಹಳ್ಳದ ಪಾಲಾಗಿದೆ. ಕಾಟಾಚಾರಕ್ಕೆ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದಾರೆ. ಸುಮಾರು 16 ಗ್ರಾಮಗಳಿಗೆ ಕುಡಿಯಲು ಬಳಕೆಯಾಗಬೇಕಿದ್ದ ನೀರು ವ್ಯರ್ಥವಾಗಿ ಪೋಲಾಗಿರೋದು ಸ್ಥಳೀಯರ ಆಕ್ರೋಶ ಇನ್ನಷ್ಟು ಹೆಚ್ಚಿದೆ.
ಇತ್ತ ಇದೇ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ತುಂಗಭದ್ರ ನದಿಯಿಂದ ಕೇವಲ 18 ಕಿಮೀ ದೂರದಲ್ಲಿ ಈ ಗ್ರಾಮವಿದ್ದರೂ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಆದರೆ ಗದಗ ಜಿಲ್ಲೆ ಬಳಗಾನೂರು ಸಮೀಪವಿರುವ ಮಲಪ್ರಭ ಬಲದಂಡೆ ಒಡೆದು ವ್ಯಾಪಕ ನೀರು ಪೋಲಾಗಿದೆ.