ಗೃಹ ಸಚಿವ ಪರಂ ಮೇಲೆ ಹುಚ್ಚ ವೆಂಕಟ್ ಗರಂ ಆಗಿದ್ದೇಕೆ?

Published : Jul 13, 2018, 04:25 PM ISTUpdated : Jul 13, 2018, 04:29 PM IST
ಗೃಹ ಸಚಿವ ಪರಂ ಮೇಲೆ ಹುಚ್ಚ ವೆಂಕಟ್ ಗರಂ ಆಗಿದ್ದೇಕೆ?

ಸಾರಾಂಶ

ಅನೇಕ ದಿನಗಳಿಂದ ಸುಮ್ಮನಾಗಿದ್ದ ನಟ ಹುಚ್ಚ ವೆಂಕಟ್ ಈ ಬಾರಿ ಹಂಪಿ ಬಗ್ಗೆ ಮಾತನಾಡಿದ್ದಾರೆ. ಗೃಹ ಸಚಿವ ಪರಮೇಶ್ವರ ಅವರಿಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ.

ತಮ್ಮ ವೆಬ್ ಪೇಜ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ವೆಂಕಟ್ ಹಂಪಿಗೆ ಕುಟುಂಬದವರು ಪ್ರವಾಸ ಮಾಡಿದರೆ ಏನು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಡಿಸಿಎಂ ಮತ್ತು ಗೃಹ ಖಾತೆ ಹೊಂದಿರುವ ಪರಮೇಶ್ವರ ಅವರನ್ನು ಯಾಕೆ ಪ್ರಶ್ನೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಪ್ರವಾಸೋದ್ಯಮ ಸಚಿವ  ಸಾ.ರಾ.ಮಹೇಶ್ ಅವರನ್ನು ಮರೆತುಬಿಟ್ಟರೆನೋ!

ಆದರೆ ವೆಂಕಟ್ ಉಲ್ಲೇಖ ಮಾಡಿರುವ ವಿಚಾರ ನಿಜಕ್ಕೂ ಸರಕಾರದ ಗಮನ ಸೆಳೆಯುವಂಥದ್ದೆ. ಪ್ರವಾಸಕ್ಕೆಂದು ಹಂಪಿಗೆ ತೆರಳಿದರೆ ಫ್ಯಾಮಿಲಿಯವರಿಗೆ ಸರಿಯಾದ ಒಂದು ರೂಮ್ ಸಿಗಲ್ಲ. ವಸತಿಗೃಹಗಳ ಕೊರತೆಯಿದೆ ಎಲ್ಲಾ ಕಡೆ ಬ್ಯಾಚುಲರ್ ಗಳೆ ಇರುತ್ತಾರೆ. ಅವರು  ಮದ್ಯಪಾನವನ್ನು ಮಾಡುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ. 

ರಾಜರಾಜೇಶ್ವರಿ ನಗರದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ವೆಂಕಟ್ ಸೋತಿದ್ದರು. ಹಾಗಾದರೆ ವೆಂಕಟ್ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ....


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್