ಮುಂಬೈ[ಜು.23]: ಜಿಯೋಫೋನ್ ತನ್ನ ಬಳಕೆದಾರರಿಗಾಗಿಯೇ ವಿಶೇಷ ರೀಚಾರ್ಜ್ ಸವಲತ್ತುಗಳನ್ನು ಘೋಷಿಸಿದೆ.
ಸಂಭಾವ್ಯ ಗ್ರಾಹಕರ ಅನುಕೂಲಕ್ಕಾಗಿ ಕ್ರಾಂತಿಕಾರಕ ವಿನಿಮಯ ಕೊಡುಗೆಯ ವಿವರಗಳು ಇದೀಗ ಲಭ್ಯವಾಗಿದ್ದು ವಿನಿಮಯ ಕೊಡುಗೆಯ ವಿವರಗಳು ಇಂತಿವೆ
undefined
1. ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಅನ್ವಯ ಜಿಯೋಫೋನ್ ಇದೀಗ ರೂ. 501 ವಾಸ್ತವಿಕ ಬೆಲೆಗೆ ದೊರಕಲಿದೆ.
2. ಹೀಗೆ ಪಾವತಿಸುವ ರೂ. 501 ಮರಳಿಸಬಹುದಾದ ಸುರಕ್ಷತಾ ಠೇವಣಿಯಾಗಿದ್ದು, ಈ ಮೂಲಕ ಜಿಯೋಫೋನ್ ವಾಸ್ತವದಲ್ಲಿ ಉಚಿತವಾಗಿ ದೊರಕಲಿದೆ.
3. ರೀಟೇಲ್ ಕೇಂದ್ರದಲ್ಲಿ ಯಾವುದೇ ಹಳೆಯ 2ಜಿ/3ಜಿ/4ಜಿ (VOLTE ಅಲ್ಲದ) ಫೋನನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಕೊಡುಗೆಯನ್ನು ತಟ್ಟನೆ ಪಡೆದುಕೊಳ್ಳಬಹುದು.
4. ವಿನಿಮಯ ಮಾಡುತ್ತಿರುವ ಫೋನು ಕೆಲಸ ಮಾಡುವಂತಿರಬೇಕು. ಹಾಗೆಯೇ ಅದರ ಚಾರ್ಜರ್ ಅನ್ನು ಕೂಡ ಜೊತೆಯಲ್ಲಿ ನೀಡಬೇಕು.
5. ಹೊಸ ಜಿಯೋಫೋನ್ ಕೊಳ್ಳುವ ಸಂದರ್ಭದಲ್ಲೇ ಹಳೆಯ ಫೋನನ್ನು ರೀಟೇಲರ್‌ಗೆ ಕೊಡಬೇಕು.
ಜಿಯೋ ಸಿಮ್
1. ಜಿಯೋಫೋನ್ ಜೊತೆಗೆ ಗ್ರಾಹಕರು ಹೊಸ ಜಿಯೋ ಸಿಮ್ ಅನ್ನು ಪಡೆಯಲಿದ್ದಾರೆ.
2. ತಮ್ಮ ಸದ್ಯದ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಬಯಸುವ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸೌಲಭ್ಯವನ್ನು ಬಳಸಿಕೊಳ್ಳಬಹುದು. ಜಿಯೋಗೆ ಎಂಎನ್‌ಪಿ ಪ್ರಕ್ರಿಯೆ ಪೂರ್ಣವಾದ ನಂತರ ಅಂತಹ ಗ್ರಾಹಕರು ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಅನುಕೂಲ ಪಡೆದುಕೊಳ್ಳಬಹುದು.
ವಿಶೇಷ ರೀಚಾರ್ಜ್ ಪ್ಲಾನ್
1. ಈ ಪ್ಲಾನ್ ಅನ್ವಯ ಆಕ್ಟೀವೇಶನ್ ಸಮಯದಲ್ಲಿ ರೂ. 594 ಪಾವತಿಸುವ ಮೂಲಕ ಗ್ರಾಹಕರು 6 ತಿಂಗಳ ಅವಧಿಗೆ ಅಪರಿಮಿತ ವಾಯ್ಸ್ ಹಾಗೂ ಡೇಟಾ ಸೌಲಭ್ಯ ಪಡೆಯಲಿದ್ದಾರೆ.
2. ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಗ್ರಾಹಕರಿಗೆ ಇದರೊಡನೆ ರೂ. 101 ಬೆಲೆಯ 6 ಜಿಬಿ ಡೇಟಾ ವೋಚರ್ ಕೂಡ ವಿಶೇಷ ವಿನಿಮಯ ಬೋನಸ್ ರೂಪದಲ್ಲಿ ದೊರಕಲಿದೆ.
3. ಹೀಗೆ ಈ ಕೊಡುಗೆಯ ಮೂಲಕ 6 ತಿಂಗಳಿನಲ್ಲಿ ಒಟ್ಟು 90 ಜಿಬಿ ಡೇಟಾ ದೊರಕಿದಂತೆ ಆಗುತ್ತದೆ.
4. ಮಾನ್ಸೂನ್ ಹಂಗಾಮ ಯೋಜನೆಯು ರೂ. 501 ವಾಸ್ತವಿಕ ಬೆಲೆಯಲ್ಲಿ ಜಿಯೋಫೋನ್ ಜೊತೆಗೆ ರೂ. 594ಕ್ಕೆ 6 ತಿಂಗಳ ಅಪರಿಮಿತ ವಾಯ್ಸ್ ಹಾಗೂ ಡೇಟಾ ಸೇವೆ ಸೇರಿದ ಸಂಯೋಜಿತ ಕೊಡುಗೆಯಾಗಿದೆ.
5. "ಜಿಯೋಫೋನ್ ಗ್ರಾಹಕರಿಗೆ ಸದ್ಯ ರೂ. 49 ಹಾಗೂ ರೂ. 153ರ ಎರಡು ಪ್ಲಾನುಗಳು ಲಭ್ಯವಿವೆ. ಈ ಪೈಕಿ ರೂ. 49ರ ಪ್ಲಾನ್ ಅನ್ನು ಮಾಸಿಕ 1 ಜಿಬಿ ಡೇಟಾ ಇರುವ ಪ್ರಾಯೋಗಿಕ ಪ್ಲಾನ್ ಎಂದು ಕರೆಯಬಹುದು. ಇದರ ಹೋಲಿಕೆಯಲ್ಲಿ ರೂ. 153ರ ನಮ್ಮ ಜನಪ್ರಿಯ ಪ್ಲಾನ್ ದಿನಕ್ಕೆ 1.5 ಜಿಬಿ ಡೇಟಾ ನೀಡುತ್ತದೆ.
6. ಇದಕ್ಕಿಂತ ಕಡಿಮೆ ಡೇಟಾವನ್ನು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಅಪೇಕ್ಷಿಸುವ ಅನೇಕ ಗ್ರಾಹಕರು ಇರಬಹುದೆಂದು ನಮಗೆ ತಿಳಿದಿದೆ. ಹೀಗಾಗಿಯೇ ನಾವು 28 ದಿನಗಳ ಅವಧಿಗೆ ಅಪರಿಮಿತ ಉಚಿತ ಕರೆಗಳು, ಪ್ರತಿನಿತ್ಯ 0.5 ಜಿಬಿ ಡೇಟಾ ಹಾಗೂ 300 ಎಸ್ಸೆಮ್ಮೆಸ್‌ಗಳನ್ನು ನೀಡುವ ರೂ. 99 ಬೆಲೆಯ ಹೊಸ ಪ್ಲಾನ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ನಮ್ಮ ಗ್ರಾಹಕರ ಮಾಸಿಕ ವೆಚ್ಚವನ್ನು ನೇರವಾಗಿ ಬಹುತೇಕ ಅರ್ಧದಷ್ಟು ಕಡಿಮೆಮಾಡಲಿದೆ"
ವಿನಿಮಯ ಯೋಜನೆಗೆ ಅರ್ಹವಾಗಲು ನಿಮ್ಮ ಹಳೆಯ ಫೋನು ಈ ಕೆಳಕಂಡ ಷರತ್ತುಗಳನ್ನು ಪೂರೈಸಬೇಕು
1. ಮೊಬೈಲ್ ಫೋನ್ ಸದ್ಯ ಕೆಲಸಮಾಡುವ ಸ್ಥಿತಿಯಲ್ಲಿರಬೇಕು (ಹ್ಯಾಂಡ್‌ಸೆಟ್‌ನ ಭಾಗಗಳಿಗೆ ಹಾನಿಯಾಗಿರಬಾರದು ಅಥವಾ ಅದರ ಭಾಗಗಳು ಕಳೆದಿರಬಾರದು; ಯಾವುದೇ ಭಾಗ ಮುರಿದಿರುವಂತಿಲ್ಲ ಅಥವಾ ಸುಟ್ಟುಹೋಗಿರುವಂತಿಲ್ಲ).
2. ಕಳೆದ 3.5 ವರ್ಷಗಳಲ್ಲಿ ಮಾರಾಟವಾದ (ಜನವರಿ 1, 2015ರ ನಂತರ) ಮೊಬೈಲುಗಳು ಮಾತ್ರ ವಿನಿಮಯಕ್ಕೆ ಅರ್ಹವಾಗಿರುತ್ತವೆ.
3. ಯಾವುದೇ ಹಳೆಯ 2ಜಿ/3ಜಿ/4ಜಿ (VOLTE ಅಲ್ಲದ) ಫೋನನ್ನು ವಿನಿಮಯಕ್ಕಾಗಿ ಸ್ವೀಕರಿಸಲಾಗುತ್ತದೆ.
4. ಜಿಯೋಫೋನ್ ಆಗಲಿ ಯಾವುದೇ ಸಿಡಿಎಂಎ ಅಥವಾ ಆಪರೇಟರ್ ಲಾಕ್ಡ್ ಸಾಧನಗಳನ್ನಾಗಲಿ ವಿನಿಮಯಕ್ಕೆ ಸ್ವೀಕರಿಸಲಾಗುವುದಿಲ್ಲ.
5. ಬ್ಯಾಟರಿ ಹಾಗೂ ಚಾರ್ಜರ್ ಎರಡನ್ನು ಹೊರತುಪಡಿಸಿ ವಿನಿಮಯಕ್ಕಾಗಿ ಬೇರೆ ಯಾವುದೇ ಪೂರಕ ಸಾಧನಗಳ (ಹೆಡ್‌ಫೋನ್ ಇತ್ಯಾದಿ) ಅಗತ್ಯವಿಲ್ಲ.
ಹಳೆಯ ಫೀಚರ್ ಫೋನ್ ವಿನಿಮಯ ಮಾಡಲು ಹೋಗುವಾಗ ನೀವು ಏನೆಲ್ಲ ಕೊಂಡೊಯ್ಯಬೇಕು
1. ಕೆಲಸಮಾಡುವ ಸ್ಥಿತಿಯಲ್ಲಿರುವ ಹಳೆಯ ಫೋನು
2. ಹಳೆಯ ಫೋನಿನ ಬ್ಯಾಟರಿ ಹಾಗೂ ಚಾರ್ಜರ್
3. ಆಧಾರ್ ಸಂಖ್ಯೆ
4. ಎಂಎನ್‌ಪಿ ಸೌಲಭ್ಯ ಬಳಸುವುದಾದರೆ, ಹೊಸ ಎಂಎನ್‌ಪಿ ಜಿಯೋ ನಂಬರ್
ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್
1. ಆಗಸ್ಟ್ 15ರಿಂದ ಪ್ರಾರಂಭಿಸಿ, ಫೇಸ್‌ಬುಕ್, ವಾಟ್ಸ್‌ಆಪ್, ಯೂಟ್ಯೂಬ್ ಹಾಗೂ ಗೂಗಲ್ ಮ್ಯಾಪ್ಸ್‌ನಂತಹ ಆಪ್‌ಗಳು ಜಿಯೋಫೋನ್‌ನಲ್ಲಿ ದೊರಕಲಿವೆ. ಈ ಮೂಲಕ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಸೇವೆಗಳನ್ನು ಪಡೆದುಕೊಳ್ಳುವ ವಿಧಾನವನ್ನೇ ಬದಲಿಸಲು ಜಿಯೋಫೋನ್ ಸನ್ನದ್ಧವಾಗಿದೆ.
2. ಜಿಯೋಫೋನ್ ಗ್ರಾಹಕರು ಈಗಾಗಲೇ ಉಚಿತ ವಾಯ್ಸ್ ಕರೆಗಳು ಹಾಗೂ ಜಿಯೋಟಿವಿ, ಜಿಯೋಸಿನಿಮಾ, ಜಿಯೋಮ್ಯೂಸಿಕ್ ಹಾಗೂ ಜಿಯೋಚಾಟ್‌ನಂತಹ ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
3. ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಧ್ವನಿರೂಪದ ಆದೇಶ (ವಾಯ್ಸ್ ಕಮ್ಯಾಂಡ್) ನೀಡಬಹುದಾದ ವಿಶಿಷ್ಟ ವ್ಯವಸ್ಥೆಯನ್ನೂ ಜಿಯೋಫೋನ್ ಗ್ರಾಹಕರು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.