ಮ್ಯೂಚುಯಲ್ ಫಂಡ್': ಹೂಡಿಕೆಯಲ್ಲಿ ವೈವಿಧ್ಯದಿಂದ ಹೆಚ್ಚು ಲಾಭ

By Suvarna Web DeskFirst Published Aug 10, 2017, 11:48 PM IST
Highlights

ವೈವಿಧ್ಯಮಯಹೂಡಿಕೆಎಂದರೆಎಷ್ಟುಫಂಡ್ಗಳಲ್ಲಿಹಣತೊಡಗಿಸಬೇಕಾಗುತ್ತದೆ? ಇಂದುಮಾರುಕಟ್ಟೆಯಲ್ಲಿನೂರಾರುತೆರೆದಮತ್ತುಮುಚ್ಚಿದಫಂಡ್ಗಳಿದ್ದು, ಜತೆಗೆ,ಆನ್ಲೈನ್ಅಲ್ಲದೆಏಜೆಂಟರಮೂಲಕವೂಹೂಡಿಕೆಮಾಡಲುಹಲವುಅವಕಾಶಗಳಿವೆ.

ವ್ಯಕ್ತಿ ಯಾರೇ ಆಗಿರಲಿ, ಉದ್ಯೋಗ ಯಾವುದೇ ಆಗಿರಲಿ, ಹಣದ ಹೂಡಿಕೆಯಲ್ಲಿ ವೈವಿಧ್ಯ ಬಹಳ ಮುಖ್ಯವಾದುದು. ಹಾಗೆಂದ ತಕ್ಷಣ ಮ್ಯೂಚುಯಲ್ ಫಂಡ್'ಗಳಳಲ್ಲಿ ಹೂಡಿಕೆಯನ್ನು ನಿರಾಕರಿಸಿ ಬಿಡುವುದು ಎಂದಲ್ಲ. ಮ್ಯೂಚುಯಲ್ ಫಂಡ್ ಎಂಬುದು ಒಂದಕ್ಕಿಂತ ಹೆಚ್ಚು ಅನುಕೂಲಗಳುಳ್ಳ ಹೂಡಿಕೆ ಅವಕಾಶ. ಏಕೆಂದರೆ, ನಾನಾ ಕಂಪನಿಗಳ ಸ್ಟಾಕ್-ಶೇರ್ಗಳು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ಲಾಭ ತಂದುಕೊಡಬಹುದು ಇಲ್ಲವೇ ನಷ್ಟಕ್ಕೂ ಕಾರಣ ಆಗಬಹುದು. ಆದರೆ, ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆಯಿಂದ ನಷ್ಟವನ್ನು ಕಡಿಮೆ ಮಾಡುವ ಜೊತೆಗೆ, ಹೂಡಿಕೆಯಿಂದ ಲಾಭ ಗಳಿಸಲು ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತವೆ.  

ನಾನಾ ಫಂಡ್ಗಳು ಮತ್ತು ಫಂಡ್ ನಿರ್ವಹಣೆಕಾರರಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದು ನಷ್ಟವನ್ನು ಇನ್ನಷ್ಟು ಕಡಿಮೆಗೊಳಿಸುವ ಒಂದು ಜಾಣತನದ ಉಪಾಯವಾಗಿದ್ದು, ಇದರಿಂದ ಒಂದು ಫಂಡ್ನಿಂದ ನಷ್ಟವಾದಲ್ಲಿ ಅದನ್ನು ಇನ್ನೊಂದರ ಲಾಭದಿಂದ ಸರಿದೂಗಿಸಬಹುದು. ಈ ಹಂತದಲ್ಲಿ ಬಹುತೇಕರನ್ನು ಒಂದು ಪ್ರಶ್ನೆ ಕಾಡುತ್ತದೆ: ಹಾಗಾದರೆ, ವೈವಿಧ್ಯಮಯ ಹೂಡಿಕೆ ಎಂದರೆ ಎಷ್ಟು ಫಂಡ್ಗಳಲ್ಲಿ ಹಣ ತೊಡಗಿಸಬೇಕಾಗುತ್ತದೆ? ಇಂದು ಮಾರುಕಟ್ಟೆಯಲ್ಲಿ ನೂರಾರು ತೆರೆದ ಮತ್ತು ಮುಚ್ಚಿದ ಫಂಡ್ಗಳಿದ್ದು, ಜತೆಗೆ,ಆನ್ಲೈನ್ ಅಲ್ಲದೆ ಏಜೆಂಟರ ಮೂಲಕವೂ ಹೂಡಿಕೆ ಮಾಡಲು ಹಲವು ಅವಕಾಶಗಳಿವೆ.  ಹೀಗಿರುವಾಗ ಹೊಸ ಹೂಡಿಕೆದಾರರು ತಮಗೆ ಸೂಕ್ತ ಎಣಿಸಿದ ಇಲ್ಲವೇ ಕೈಗೆ ಸಿಕ್ಕಿದ ಫಂಡ್ನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದರಿಂದ ಉದ್ಭವಿಸುವ ಸಮಸ್ಯೆಯೆಂದರೆ, ನೀವು ಒಂದು ಫಂಡ್ ಬದಲು 15  ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಿದ ತಕ್ಷಣ ನಿಮ್ಮ ಹೂಡಿಕೆ 15 ಪಟ್ಟು ಸಮರ್ಪಕ ಎಂದಾಗುವುದಿಲ್ಲ. ತದ್ವಿರುದ್ಧವಾಗಿ, ಇದು ಬರಿದೇ ಉಬ್ಬಿಸಿದ, ಅಂತರ್ಗತ ಅಪಾಯವಿರುವ ಫಂಡ್ ಒಂದರಲ್ಲಿ ಹೂಡಿಕೆ ಮಾಡಿದಂತೆ ಆಗಲಿದೆ, ಅಷ್ಟೆ: ಹೆಚ್ಚು ಹೆಚ್ಚು ಫಂಡ್ಗಳನ್ನು ನೀವು ಖರೀದಿಸಿದಂತೆ, ನಿಮ್ಮ ಖಾತೆಯಲ್ಲಿ ಅದೇ ಸ್ಟಾಕ್'ಗಳನ್ನು ಬೇರೆ ಬೇರೆ ರೂಪದಲ್ಲಿ ಸೇರಿಸಿದಂತೆ ಆಗಲಿದೆ. ಅಲ್ಲದೆ, ನೀವು ಖರೀದಿಸಿದ ಫಂಡ್'ಗಳ ಸಂಖ್ಯೆ ಹೆಚ್ಚಿದಂತೆ,ಅವುಗಳನ್ನು ನಿರ್ವಹಿಸುವುದು ಕಷ್ಟವಾಗಲಿದೆ. ಇದರಿಂದ ಮ್ಯೂಚುಯಲ್ ಫಂಡ್ ಖರೀದಿಗೆ ಮುಖ್ಯ ಕಾರಣವಾದ ಅನುಕೂಲ ಎಂಬುದು ನಾಪತ್ತೆ ಆಗಿಬಿಡುತ್ತದೆ.

ಎಷ್ಟು ಹೂಡಿಕೆ?

ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದು ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿದೆ. ಅಂದರೆ, ಪ್ರತಿ ತಿಂಗಳು ನೀವು ಎಷ್ಟು ಹಣ ಹೂಡಿಕೆ ಮಾಡಬಲ್ಲಿರಿ ಎಂಬುದನ್ನು ಆಧರಿಸಿ, ಫಂಡ್'ಗಳ ಪಟ್ಟಿಯನ್ನು ಸಿದ್ಧಗೊಳಿಸಿ ಕೊಳ್ಳಿ. ಒಂದು ವೇಳೆ ನೀವು ಈಗತಾನೇ ಪ್ರಾರಂಭಿಸಿದ್ದು, 80ಸಿಯ ಲಾಭ ಪಡೆದುಕೊಂಡಿಲ್ಲ ಎಂದಾದಲ್ಲಿ, ನೀವು ಇಎಲ್ಎಸ್ಎಸ್ ಫಂಡ್'ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಒಂದು ವೇಳೆ ಸ್ವಲ್ಪ ಮಟ್ಟಿಗೆ ನಷ್ಟಕ್ಕೆ ಸಿಲುಕಲು ಸಿದ್ಧವಿದ್ದೀರಿ ಎಂದಾದರೆ, ದೂರ ಕಾಲದಲ್ಲಿ ಹೆಚ್ಚು ಲಾಭ ನೀಡುವ ಮಿಡ್ ಕ್ಯಾಪ್ ಫಂಡ್ನಲ್ಲಿ ಹಣ ಹೂಡಿಕೆ ಮಾಡಬಹುದು. ತದ್ವಿರುದ್ಧವಾಗಿ, ನಾನು ಯಾವುದೇ ಹಣ ಕಳೆದುಕೊಳ್ಳಲು ಸಿದ್ಧವಿಲ್ಲ ಎಂದಾದರೆ, ವೈವಿಧ್ಯಮಯ ಈಕ್ವಿಟಿ ಫಂಡ್'ಗಳು ನಿಮಗೆ ಸೂಕ್ತ. ಅಲ್ಲದೆ, ನಿಮ್ಮ ಖಾತೆಯಲ್ಲಿ ಡೆಟ್ ಹೂಡಿಕೆಗಳೂ ಇರಲಿ. ಅದು ಬ್ಯಾಲೆನ್ಸ್ಡ್ ಇಲ್ಲವೇ ಬಾಂಡ್ ಫಂಡ್ ಯಾವುದಾದರೂ ಆಗಿರಬಹುದು.

ಖಾತೆ ನಿರ್ವಹಣೆ

ನಿಮ್ಮ ಖಾತೆಯಲ್ಲಿ 4 ಇಲ್ಲವೇ 5 ಫಂಡ್'ಗಳು ಇದ್ದರೆ, ವೈವಿಧ್ಯಮಯ ಹೂಡಿಕೆಯ ಆಶಯ ಈಡೇರಲಿದೆ. ಒಂದು ವೇಳೆ ಬೋನಸ್ ಇಲ್ಲವೇ ಆದಾಯ ಹೆಚ್ಚಳದಿಂದ ಅಧಿಕ ಹಣ ಸೇರಿಕೊಂಡಲ್ಲಿ, ಇದೇ ಫಂಡ್'ಗಳಲ್ಲಿ ಸಿಪ್(ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಕಂತಿನ ಮೊತ್ತವನ್ನು ಹೆಚ್ಚಿಸುವ ಮೂಲಕ ಹೂಡಿಕೆ ಮಾಡಬಹುದು. ಇದು ಹೊಸ ಫಂಡ್'ಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಉತ್ತಮ ಕೆಲಸ.  ಈ ಉಪಾಯವು ನಿಮ್ಮ ಖಾತೆಯನ್ನು ಲಾಭದಾಯಕವಾಗಿಸುವುದಲ್ಲದೆ, ನಿರ್ವಹಣೆ ಸುಲಭವಾಗಲಿದೆ ಮತ್ತು ಖಾತೆಯನ್ನು ಹೆಚ್ಚು ಕಾಲ ಸಮರ್ಥವಾಗಿ ನಿರ್ವಹಿಸಬಹುದು.

- ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್.ಕಾಂ

 

click me!