
ನವದೆಹಲಿ: ಮಹಿಳಾ ಪೈಲಟ್ ಒಬ್ಬರ ಜಾಣ್ಮೆಯಿಂದ ಏರ್ ಇಂಡಿಯಾ-ವಿಸ್ತಾರ ವಿಮಾನಗಳ ನಡುವೆ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ತಪ್ಪಿದೆ. ಏರಿಂಡಿಯಾದ ಕ್ಯಾಪ್ಟನ್ ಅನುಪಮಾ ಕೊಹ್ಲಿ ಅವರ ಸಮಯ ಪ್ರಜ್ಞೆಯಿಂದ ಎರಡೂ ವಿಮಾನಗಳಲ್ಲಿನ 261 ಪ್ರಯಾಣಿಕರ ಜೀವ ಉಳಿದಿದೆ.
ಫೆ. 7ರಂದು ಮುಂಬೈ ವಾಯುವಲಯದಲ್ಲಿ ವಿಸ್ತಾರ ಮತ್ತು ಏರಿಂಡಿಯಾ ವಿಮಾನಗಳು, ವೈಮಾನಿಕ ನಿಯಮಗಳಿಗೆ ವಿರುದ್ಧವಾಗಿ ಪರಸ್ಪರ ಕೇವಲ 100 ಅಡಿ ಅಂತರದಲ್ಲೇ ಹಾರಾಟ ನಡೆಸುತ್ತಿದ್ದವು. ಈ ವೇಳೆ ವಿಮಾನದಲ್ಲಿನ ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಯ ನೀಡಿದ ಸಂದೇಶವನ್ನು ತಕ್ಷಣವೇ ಗಮಿನಿಸಿದ ಏರಿಂಡಿಯಾದ ಮಹಿಳಾ ಕ್ಯಾಪ್ಟನ್ ಅನುಪಮಾ ಕೊಹ್ಲಿ, ತಕ್ಷಣವೇ ತಮ್ಮ ವಿಮಾನವನ್ನು ಸುರಕ್ಷಿತ ದೂರಕ್ಕೆ ಕೊಂಡೊಯ್ಯುವ ಮೂಲಕ ಸಂಭವನೀಯ ಅಪಘಾತವನ್ನು ತಪ್ಪಿಸಿದ್ದಾರೆ.
ಈ ಘಟನೆ ನಡೆಯುವಾಗ ವಿಸ್ತಾರ ವಿಮಾನದಲ್ಲಿ 152 ಪ್ರಯಾಣಿಕರು ಮತ್ತು ಏರಿಂಡಿಯಾದಲ್ಲಿ 109 ಪ್ರಯಾಣಿಕರು ಇದ್ದರು. ಘಟನೆ ಕುರಿತು ಇದೀಗ ತನಿಖೆಗೆ ಆದೇಶಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.