200 ಕೋಟಿ ವೆಚ್ಚದ ಅದ್ದೂರಿ ಮದುವೆ, 40 ಕ್ವಿಂಟಾಲ್ ಕಸ!

Published : Jun 25, 2019, 12:18 PM ISTUpdated : Jun 25, 2019, 12:45 PM IST
200 ಕೋಟಿ ವೆಚ್ಚದ ಅದ್ದೂರಿ ಮದುವೆ, 40 ಕ್ವಿಂಟಾಲ್ ಕಸ!

ಸಾರಾಂಶ

ಉದ್ಯಮಿ ಮಕ್ಕಳ ಅದ್ಧೂರಿ ಮದುವೆ| ಗುಡ್ಡ ಗಾಡು ಪ್ರದೇಶದ ರೆಸಾರ್ಟ್‌ನಲ್ಲಿ ನಡೆಯಿತು ಶೋಕಿ ಮದುವೆ| ಕಾರ್ಯಕ್ರಮ ಮುಗಿಸಿ 40 ಕ್ವಿಂಟಾಲ್‌ಗೂ ಅಧಿಕ ಕಸದ ರಾಶಿ ಬಿಟ್ಟೋದ್ರು| 200 ಕೋಟಿ ವೆ೪ಚ್ಚದ ಮದುವೆಗೆ ಪರವಾನಿಗೆ ಕೊಟ್ಟ ನಿಗಮ ಮಂಡಳಿಗೆ ಕಸ ನಿರ್ವಹಣೆಯೇ ಈಗ ತಲೆನೋವು

ಡೆಹ್ರಾಡೂನ್[ಜೂ.25]: 200 ಕೋಟಿ ವೆಚ್ಚದ ಅದ್ದೂರಿ ಮದುವೆಗೆ ಪರವಾನಿಗೆ ನೀಡಿದ್ದ ಉತ್ತರಾಖಂಡ್ ನ ಔಲಿಯ ನಗರ ನಿಗಮ ಮಂಡಳಿ ಸದ್ಯ ಅಲ್ಲಿ ಬಿದ್ದಿರುವ ರಾಶಿ ರಾಶಿ ಕಸ ಹೇಗೆ ಖಾಲಿ ಮಾಡಿಸುವುದು ಎಂದು ತಲೆ ಚಚ್ಚಿಕೊಳ್ಳುತ್ತಿದೆ. 

ಹೌದು ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ವಿವಾದಿತ ಉದ್ಯಮಿ ಗುಪ್ತಾ ಕುಟುಂಬದ ಮದುವೆಯಾಗಿತ್ತು. ತುಲ್ ಗುಪ್ತಾರ ಮಗ ಶಶಾಂಕ್ ಗುಪ್ತಾ ಹಾಗೂ ದುಬೈನ ರಿಯಲ್ಟಿ ಉದ್ಯಮಿ ವಿಧಾಲ್ ಜಾಲಾನ್ ಮಗಳು ಶಿವಾಂಗಿ ಮದುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಒಂದು ಸ್ಕೀ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. 

ಈ ಮದುವೆಯಲ್ಲಿ ಉತ್ತರಾಖಂಡ್ ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್, ಬಾಲಿವುಡ್ ನಟಿ ಕತ್ರೀನಾ ಕೈಫ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಬಾಬಾ ರಾಮ್ ದೇವ್ ಮದುವೆ ಕಾರ್ಯಕ್ರಮದಲ್ಲಿ 2 ಗಂಟೆಗಳ ಯೋಗ ಕಾರ್ಯಕ್ರಮ ನಡೆಸಿದ್ದರು. ಅತಿಥಿಗಳನ್ನು ಕರೆ ತರಲು ಹೆಲಿಕಾಪ್ಟರ್ ಗಳನ್ನೂ ಬಾಡಿಗೆಗೆ ಪಡೆಯಲಾಗಿತ್ತು. ಇಲ್ಲಿನ ಬಹುತೇಕ ಎಲ್ಲಾ ಹೋಟೆಲ್ ಗಳನ್ನು ಅತಿಥಿಗಳಿಗಾಘಿ ಬುಕ್ ಮಾಡಲಾಗಿತ್ತು ಹಾಗೂ ಸ್ವಿಡ್ಜರ್ಲೆಂಡ್ ನಿಂದ ಹೂವುಗಳನ್ನು ತರಿಸಲಾಗಿತ್ತು. 

ಇಂತಹ ಅದ್ಧೂರಿ ಮದುವೆ ಕಾರ್ಯಕ್ರಮ ಸದ್ಯ ಮುಕ್ತಾಯವಾಗಿದೆ. ಆದರೆ ಕುಟುಂಬಸ್ಥರು ಮಾತ್ರ ನಗರ ನಿಗಮ ಪಾಲಿಕೆ ಸಿಬ್ಬಂದಿಗಳಿಗೆ ಬರೋಬ್ಬರಿ 40 ಕ್ವಿಂಟಾಲ್ ಗೂ ಹೆಚ್ಚು ಕಸದವನ್ನು ಬಿಟ್ಟು ಹೋಗಿದ್ದಾರೆ. ಸದ್ಯ ನಗರಪಾಲಿಕಾ ಸಚಿವ ಜೋಶಿಮಠ್ ಜೊತೆಗೆ 20 ಜನರ ತಂಡಕ್ಕೆ ಕಸ ಕಸ ನಿರ್ವಹಣಾ ಜವಾಬ್ದಾರಿ ಹೊರಿಸಲಾಗಿದೆ. 

ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಎಲ್ಲೆಡೆ ಪ್ಲಾಸ್ಟಿಕ್ಪ್ಯಾಕೆಟ್ ಹಾಗೂ ಬಾಟಲ್ ಗಳು ಬಿದ್ದಿವೆ. ನಮ್ಮ ಗೋವುಗಳು ಪ್ರತಿ ದಿನ ಇಲ್ಲಿನ ಗುಡ್ಡಗಾಡು ಪ್ರದೇಶಕ್ಕೆ ಮೇಯಲು ಹೋಗುತ್ತವೆ. ಹೀಗಿರುವಗ ಅವುಗಳು ಪ್ಲಾಸ್ಟಿಕ್ ತಿಂದರೆ ಏನು ಮಡುವುದು? ಇದಕ್ಕೆ ಯಾರು ಹೊಣೆ? ಇಲ್ಲಿನ ಸ್ಥಿತಿ ನೋಡಲಾಗುತ್ತಿಲ್ಲ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ವರ್ಷ ಪ್ರೀತಿಸಿದವಳಿಗೆ ಮೋಸ, ₹4.5 ಲಕ್ಷ ವಂಚನೆ, ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ!
ದಿವ್ಯಾಂಗ ಯುವತಿ ಮೇಲೆ ಬಲತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!