
ಹುಬ್ಬಳ್ಳಿ: ಪ್ರತ್ಯೇಕ ‘ಲಿಂಗಾಯತ ಧರ್ಮ’ಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟವನ್ನು ‘ರಾಜಕೀಯ ಛಾಯೆ’ಯಿಂದ ಮುಕ್ತಗೊಳಿಸುವ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳ ಚಿಂತನೆಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿರುವ ಮೇಲ್ಮನೆಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಇನ್ನು ಮುಂದೆ ಮಠಾಧೀಶರ ನೇತೃತ್ವದಲ್ಲೇ ಲಿಂಗಾಯತ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಕನ್ನಡ ಪ್ರಭ’ದಲ್ಲಿ ಪ್ರಕಟವಾದ ಶ್ರೀಗಳ ಅಭಿಮತಕ್ಕೆ ಪ್ರತಿಕ್ರಿಯಿಸಿರುವ ಅವರು, ರಾಜಕಾರಣಿಗಳಾದ ತಾವೆಲ್ಲ ವೇದಿಕೆಯ ಕೆಳಗೆ ಕುಳಿತು ಹೋರಾಟವನ್ನು ಯಶಸ್ವಿಗೊಳಿಸುವುದಾಗಿ ಹೇಳಿದರು.
ಪಂಚ ಪೀಠಾಧೀಶರ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಹೋರಾಟ ಬೆಂಬಲಿಸಿ, ಇದರಿಂದ ವೀರಶೈವರಿಗೂ ಅನುಕೂಲವಿದೆ ಎಂದು ಶ್ರೀಗಳಲ್ಲಿ ಹಲವುಬಾರಿ ಮನವಿ ಮಾಡಿದ್ದೇನೆ ಎಂದು ಹೊರಟ್ಟಿ ಹೇಳಿದರು.
ಜೋಶಿ ವಿರುದ್ಧ ಲಿಂಗಾಯತರ ಧ್ವನಿ:
ಲಿಂಗಾಯತ ಧರ್ಮ ಹೋರಾಟದ ಕೇಂದ್ರ ಬಿಂದುವಾಗಿರುವ ಸಚಿವ ವಿನಯ್ ಕುಲಕರ್ಣಿರನ್ನು ಯೋಗೀಶಗೌಡ ಗೌಡ ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ಮುಖಂಡರು ಹವಣಿಸುತ್ತಿದ್ದು, ಸಚಿವರ ಪರವಾಗಿ ಇದೀಗ ಲಿಂಗಾಯತ ಮುಖಂಡರು ಧ್ವನಿ ಎತ್ತಲು ಮುಂದಾಗಿದ್ದಾರೆ.
ಸಚಿವರ ತೇಜೋವಧೆ ಪ್ರಯತ್ನಗಳ ಹಿಂದೆ ಸಂಸದ ಜೋಶಿ ಕೈವಾಡವಿದ್ದು, ಸಮುದಾಯದ ಹೋರಾಟ ಸಂಸದರ ವಿರುದ್ಧ ಕೇಂದ್ರಿಕೃತ ಗೊಳ್ಳಬೇಕು ಎನ್ನುವ ಅಭಿಪ್ರಾಯಗಳು ಇಲ್ಲಿನ ನೌಕರರ ಭವನದಲ್ಲಿ ನಡೆದ ಲಿಂಗಾಯತ ಸಮುದಾಯದ ಗುಪ್ತ ಸಭೆಯಲ್ಲಿ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.