
ಚಂಡೀಗಢ(ಅ.12): ರೇಪ್ ಕೇಸಲ್ಲಿ ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಥದ ಮುಖ್ಯಸ್ಥ ಗುರ್ಮೀತ್ ದೋಷಿ ಎಂದು ತೀರ್ಪು ಬಂದ ಬಳಿಕ ಹರ್ಯಾಣದ ಪಂಚಕುಲದಲ್ಲಿ ಸಂ‘ವಿಸಿದ, 38 ಮಂದಿಯನ್ನು ಬಲಿ ಪಡೆದ ಹಿಂಸಾಚಾರದ ರೂವಾರಿ ನಾನೇ ಎಂದು ಬಾಬಾನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಡೇರಾ ಬೆಂಬಲಿಗರಿಗೆ 1.5 ಕೋಟಿ ರು.ವರೆಗೂ ಹಣ ನೀಡಿ ಹಿಂಸಾಚಾರಕ್ಕೆ ಹನಿಪ್ರೀತ್ ಕುಮ್ಮಕ್ಕು ನೀಡಿದ್ದಳು ಎಂದು ಕೆಲ ದಿನಗಳ ಹಿಂದಷ್ಟೇ ಪೊಲೀಸರು ತಿಳಿಸಿದ್ದರು. ವಿಚಾರಣೆ ವೇಳೆ ಅದೆಲ್ಲವನ್ನೂ ಹನಿಪ್ರೀತ್ ಒಪ್ಪಿಕೊಂಡಿದ್ದಾಳೆ. ಆ.25ರಂದು ಹಿಂಸಾಚಾರ ನಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ಆ.17ರಂದೇ ಸಭೆ ನಡೆಸಿ, ಹಿಂಸಾ ಚಾರ ಕುರಿತ ನೀಲನಕ್ಷೆ ತಯಾರಿಸಲಾಯಿತು. ಅದರಲ್ಲಿ ನಾನು ಭಾಗಿಯಾಗಿದ್ದೆ. ಹಿಂಸಾಚಾರ ನಡೆಸಲೆಂದೇ ಡೇರಾ ಬೆಂಬಲಿಗರಿಗೆ ಹಣ ಕೊಟ್ಟು ಹೊಣೆಗಾರಿಕೆ ವಹಿಸಲಾಗಿತ್ತು ಎಂದೂ ಹೇಳಿದ್ದಾಳೆ.
ಹನಿಪ್ರೀತ್‌ಳ ಲ್ಯಾಪ್'ಟಾಪ್'ನಲ್ಲಿ ಮತ್ತಷ್ಟು ಮಾಹಿತಿಗಳು ಇರಬಹುದು ಎಂಬ ಕಾರಣಕ್ಕೆ ಅದನ್ನು ವಶಪಡಿಸಿಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ. ಬಾಬಾನ ಅಕ್ರಮ ಸಂಪತ್ತಿನ ಮಾಹಿತಿ ಹನಿಪ್ರೀತ್‌ಗೆ ಇದ್ದಿರಬಹುದು. ಬಾಬಾ ಜೈಲುಪಾಲಾದ ಬಳಿಕ ಅದನ್ನು ರಹಸ್ಯ ಸ್ಥಳಕ್ಕೆ ಸಾಗಿಸಿರಬಹುದು ಎಂಬ ಶಂಕೆಯೂ ಪೊಲೀಸರನ್ನು ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.