ಯೋಜನೆ ಹೆಸರಲ್ಲಿ ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ..!: ಒಂದೊಂದು ಎಲೆಕ್ಷನ್'ಗೂ ಒಂದೊಂದು ಯೋಜನೆ..!

Published : Oct 28, 2017, 09:03 AM ISTUpdated : Apr 11, 2018, 12:41 PM IST
ಯೋಜನೆ ಹೆಸರಲ್ಲಿ ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ..!: ಒಂದೊಂದು ಎಲೆಕ್ಷನ್'ಗೂ ಒಂದೊಂದು ಯೋಜನೆ..!

ಸಾರಾಂಶ

ದಶಕಗಳ ಹೈದ್ರಾಬಾದ್ ಕರ್ನಾಟಕದ ಜನರ ಕನಸಿನ ಯೋಜನೆ ಅದು, ನಾಳೆ ಪ್ರಧಾನಿಗಳು ಈ ಯೋಜನೆಗೆ ಚಾಲನೆ ನೀಡಿ.. ಇಲ್ಲಿನ ಜನರ ಬಹುದಿನದ ಕನಸನ್ನು ನನಸಾಗಿಸುತ್ತಿದ್ದಾರೆ. ಆದ್ರೆ, ಇದರ ಹಿಂದೆ ಬಿಜೆಪಿ ವೋಟ್​'ಬ್ಯಾಂಕ್ ರಾಜಕೀಯವಿದಿಯಂತೆ. ಈ ಕುರಿತ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ ನೋಡಿ

ಬೀದರ್(ಅ.28): ಹೈದ್ರಾಬಾದ್ ಕರ್ನಾಟಕ ಭಾಗದ ಕನಸಿನ ರೈಲು ಯೋಜನೆಗೆ ನಾಳೆ ಹಸಿರು ನಿಶಾನೆ ಸಿಗಲಿದೆ. ಕಲಬುರಗಿ-ಬೀದರ್ ನಡುವಿನ 110 ಕಿಲೋ ಮೀಟರ್ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ. ಆದರೆ, ಈ  ಯೋಜನೆ ಹೆಸರಲ್ಲಿ ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣ ಮಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.. ಇದಕ್ಕೆ ಕಾರಣ ಅಮಿತ್ ಶಾ 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ  ಈ ಹೇಳಿಕೆ .

ಹೈದ್ರಾಬಾದ್ ಕರ್ನಾಟಕ ಸ್ವತಂತ್ರ ಗೊಳಿಸಲು ಪ್ರಾಣ ತೆತ್ತ ಬಸವಕಲ್ಯಾಣದ ಗೊರ್ಟಾ ಗ್ರಾಮದ ಹುತಾತ್ಮರ ಸ್ಮಾರಕ ನಿರ್ಮಿಸೋ ಭರವಸೆ ನೀಡಿ ಲೋಕಸಭಾ ಚುನಾವಣೆ ವೇಳೆ ಅಮಿತ್ ಶಾ ವೋಟು ಗಿಟ್ಟಿಸಿಕೊಂಡಿದ್ದರಂತೆ.. ಅದಾದ ಬಳಿಕ ಇಲ್ಲಿಂದ ಆಯ್ಕೆಯಾದ ಬಿದರ್ ಸಂಸದ ಭಗವಂತ್ ಖೂಬಾ ತಿರುಗಿಯೂ ನೋಡಿಲ್ಲವಂತೆ. ಅಮಿತ್​ ಶಾ ಅವರಿಗಂತೂ ನೆನೆಪೇ ಇಲ್ಲ. ಈಗ 2018ರ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಹಾಗೇ ರೈಲು ಯೋಜನೆ ನೆನಪಾಗಿದೆ ಅನ್ನೋದು ಸ್ಥಳೀಯರ ಆರೋಪ.

ಪ್ರತಿ ಎಲೆಕ್ಷನ್ ವೇಳೆ ಒಂದೊಂದು ಯೋಜನೆ ಹೆಸರಲ್ಲಿ ಬಿಜೆಪಿ ವೋಟ್​ಬ್ಯಾಂಕ್ ರಾಜಕೀಯ ಮಾಡುತ್ತಿದೆ ಅನ್ನೋದು ಇವರ ಆರೋಪ.. ಅದೇನೆ ಇದ್ರೂ.. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲು ಮಾರ್ಗಕ್ಕೆ ನಾಳೆ ಉದ್ಘಾಟನೆಯಾಗ್ತಿರೋದು ಖುಷಿಯ ಸಂಗತಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್