ಸಿಎಂ ‘ಗೃಹ’ ಖಾತೆ ಚಿಂತೆ..!

Published : Jul 14, 2017, 12:35 AM ISTUpdated : Apr 11, 2018, 01:10 PM IST
ಸಿಎಂ ‘ಗೃಹ’ ಖಾತೆ ಚಿಂತೆ..!

ಸಾರಾಂಶ

ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಅನ್ನೋ ಕುರಿತು ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಎಲ್ಲವನ್ನೂ ನಿಭಾಯಿಸೋದು ಕಷ್ಟವಾಗುತ್ತೆ. ಆದ್ರಿಂದ ಇಲಾಖೆ ಹೊಣೆಯನ್ನು ಸಮರ್ಥರಿಗೆ ನೀಡುವ ಇಂಗಿತವನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸ್ವಲ್ಪ ತಡವಾಗಿಯೇ ಬೆಳಕಿಗೆ ಬಂದಿದೆ.

ಬೆಂಗಳೂರು(ಜು.14): ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಇಲಾಖೆಯಯನ್ನ ಸಿದ್ರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಲ್ಲಿವರೆಗೂ ಇಲಾಖೆಯನ್ನ ಕೆಂಪಯ್ಯ ಮೂಲಕ ಹ್ಯಾಂಡಲ್ ಮಾಡಬಹುದು ಅನ್ನೋ ಭಾವನೆ ಸಿದ್ದರಾಮಯ್ಯ ಅವರಲ್ಲಿತ್ತು. ಅಲ್ಲದೇ, ಹಾಗೆಯೇ ಇಲಾಖೆಯನ್ನು ಮುನ್ನಡೆಸಿದ್ದರು. ಆದ್ರೆ ಇದೀಗ ಗೃಹ ಇಲಾಖೆ ಹೊಣೆಯಿಂದ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಅನ್ನೋ ಕುರಿತು ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಎಲ್ಲವನ್ನೂ ನಿಭಾಯಿಸೋದು ಕಷ್ಟವಾಗುತ್ತೆ. ಆದ್ರಿಂದ ಇಲಾಖೆ ಹೊಣೆಯನ್ನು ಸಮರ್ಥರಿಗೆ ನೀಡುವ ಇಂಗಿತವನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸ್ವಲ್ಪ ತಡವಾಗಿಯೇ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಗಲಭೆಗೂ ಮುನ್ನ ಗೃಹ ಖಾತೆಯನ್ನು ಸಿರೀಯಸ್ ಆಗಿ ತಗೊಂಡಿರಲಿಲ್ಲ ಸಿದ್ರಾಮಯ್ಯ. ಯಾವಾಗ ಗಲಭೆ ನಿಯಂತ್ರಿಸುವಲ್ಲಿ ಗೃಹ ಇಲಾಖೆ ವಿಫಲವಾಯಿತು ಅನ್ನೋ ಮಾತು ಕೇಳಿ ಬಂತೋ, ಅಲ್ಲಿಗೆ ಕಂಗಾಲಾದ ಸಿದ್ದರಾಮಯ್ಯ ಕೂಡಲೇ ಇಲಾಖೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಚಿಂತನೆ ನಡೆಸಿದರು. ಕ್ಯಾಬಿನೆಟ್​ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ರಮೇಶ್​​ಕುಮಾರ್ ಈ ಹುದ್ದೆಗೆ ಸೂಕ್ತರಾಗಿದ್ದು, ಗಲಭೆಯಂತಹ ಸನ್ನಿವೇಶಗಳನ್ನ ಮತ್ತು ಬಿಜೆಪಿಯ ಹೋರಾಟಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ರಮೇಶ್​​ಕುಮಾರ ಇದಕ್ಕೆ ಸೂಕ್ತರು ಅನ್ನೋ ಮಾತನ್ನು ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆಯೇ ಸಿದ್ರಾಯ್ಯರ ಸ್ಥಿತಿಯೂ ಹಾಗೆಯೇ ಆಗಿದೆ. ಕೆಲವೇ ದಿನಗಳಲ್ಲಿ ಗೃಹ ಇಲಾಖೆಯನ್ನು ಹಾಲಿ ಆರೋಗ್ಯ ಸಚಿವರಾಗಿರುವ ರಮೇಶ್​​ಕುಮಾರ ಅವ್ರಿಗೆ ವಹಿಸಲಾಗುವುದು ಅನ್ನೋ ಮಾತಂತೂ ಕೈ ಪಾಳಯದಲ್ಲಿ ಜೋರಾಗಿದೆ.

- ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ ಹೆಸರಿಗೆ ಅಮೆರಿಕಾದಲ್ಲಿ 'ಕೀರ್ತಿ' ತಂದ ಅನೂಯಾ ಸ್ವಾಮಿ.. ಯಾರು ಈ 'ಪಂಕಜ'..?!
ಅಯ್ಯಪ್ಪ ಮಾಲಾಧಾರಿ ಆಟೋ ಚಾಲಕನಿಗೆ ಕಿವಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ ಬೆಂಗಳೂರು ಟ್ರಾಫಿಕ್ ಪೊಲೀಸ್!