ಅಂಬಾಸಿಡರ್ ಕಾರು 80 ಕೋಟಿ ರೂ.ಗೆ ಪ್ಯೂಜೆ ಪಾಲು

Published : Feb 11, 2017, 10:53 AM ISTUpdated : Apr 11, 2018, 12:50 PM IST
ಅಂಬಾಸಿಡರ್ ಕಾರು 80 ಕೋಟಿ ರೂ.ಗೆ ಪ್ಯೂಜೆ ಪಾಲು

ಸಾರಾಂಶ

ಉತ್ಪಾಧನೆ ಸ್ಥಗಿತಗೊಳಿಸುವ ಕಡೆಯ ದಿನಗಳಲ್ಲಿ ದಿನಕ್ಕೆ ಕೇವಲ 5 ಅಂಬಾಸಿಡರ್ ಕಾರುಗಳನ್ನು ಮಾತ್ರ ಉತ್ಫಾದಿಸಲಾಗುತ್ತಿತ್ತು.

ಕೋಲ್ಕತಾ(ಫೆ.11): ಶ್ರೀಸಾಮಾನ್ಯರಿಂದ ಹಿಡಿದು ಪ್ರಧಾನಿವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ವಾಹನವಾಗಿದ್ದ ಅಂಬಾಸಿಡರ್ ಕಾರಿನ ಬ್ರ್ಯಾಂಡ್ ಈಗ ಮಾರಾಟವಾಗಿದೆ.

ಫ್ರಾನ್ಸ್‌ನ ಕಾರು ತಯಾರಿಕಾ ಕಂಪನಿ ಪ್ಯೂಜೆ, 80 ಕೋಟಿ ರೂಪಾಯಿಗೆ ಅಂಬಾಸಿಡರ್ ಬ್ರ್ಯಾಂಡ್ ಅನ್ನು ತನ್ನದಾಗಿಸಿಕೊಂಡಿದೆ.

ಪ್ಯೂಜೆ ಕಂಪನಿ ಹಳೆಯ ವಿನ್ಯಾಸದಲ್ಲೇ ಅಂಬಾಸಿಡರ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದ್ದು, ತನ್ನ ಹೊಸ ಕಾರೊಂದಕ್ಕೆ ಅಂಬಾಸಿಡರ್ ಹೆಸರನ್ನು ಬಳಸಿಕೊಳ್ಳುವ ಸಂಭವವಿದೆ ಎಂದು ಹೇಳಲಾಗಿದೆ.

ಮಾರುತಿ- ಸುಜುಕಿ ಕಂಪನಿಯ ಹವಾ ಆರಂಭವಾಗುವ ಮುನ್ನ 1960 ಹಾಗೂ 70ರ ದಶಕದಲ್ಲಿ ಅಂಬಾಸಿಡರ್ ಕಾರು ಭಾರತೀಯರ ಅಚ್ಚುಮೆಚ್ಚಿನ ಆಯ್ಕೆಯಾಗಿತ್ತು. ಅದು ಪ್ರತಿಷ್ಠೆಯ ಸಂಕೇತ ಕೂಡಾ ಆಗಿತ್ತು. ಆದರೆ ಈಗಿನ ಮಾರುಕಟ್ಟೆಯಲ್ಲಿ ಅಂಬಾಸಿಡರ್'ಗೆ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೂರು ವರ್ಷಗಳ ಹಿಂದೆಯೇ ಕಾರು ಉತ್ಪಾದನೆ ಸ್ಥಗಿತಗೊಂಡಿತ್ತು.

ಅಂಬಾಸಿಡರ್ ಬ್ರ್ಯಾಂಡ್ ಮಾರಾಟದಿಂದ ಬರುವ 80 ಕೋಟಿ ರೂಪಾಯಿ ಹಣವನ್ನು ನೌಕರರ ಬಾಕಿ ತೀರಿಸಲು ಹಾಗೂ ಸಾಲ ಮರುಪಾವತಿಸಲು ಬಳಕೆ ಮಾಡಿಕೊಳ್ಳುವುದಾಗಿ ಅದರ ಮಾಲೀಕತ್ವ ಹೊಂದಿದ್ದ ಸಿ.ಕೆ. ಬಿರ್ಲಾ ಗ್ರೂಪ್ ಒಡೆತನದ ಹಿಂದುಸ್ತಾನ್ ಮೋಟರ್ಸ್‌ ತಿಳಿಸಿದೆ.

ಅಂಬಾಸಿಡರ್ ಇತಿಹಾಸ:

1958 ರಲ್ಲಿ ಅಂಬಾಸಿಡರ್ ಉತ್ಫಾದನೆ ಆರಂಭವಾಯಿತು.

1980ರ ಮಧ್ಯ ಭಾಗದಲ್ಲಿ ವರ್ಷಕ್ಕೆ 24ಸಾವಿರ ಕಾರುಗಳನ್ನು ಉತ್ಫಾದಿಸಲಾಗುತ್ತಿತ್ತು.

2013-14ರಲ್ಲಿ ಕೇವಲ 2,439 ಕ್ಕೆ ಕುಸಿದ ಕಾರುಗಳ ಉತ್ಫಾದನೆ.

ಉತ್ಪಾಧನೆ ಸ್ಥಗಿತಗೊಳಿಸುವ ಕಡೆಯ ದಿನಗಳಲ್ಲಿ ದಿನಕ್ಕೆ ಕೇವಲ 5 ಅಂಬಾಸಿಡರ್ ಕಾರುಗಳನ್ನು ಮಾತ್ರ ಉತ್ಫಾದಿಸಲಾಗುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ಎನ್‌ಐಎ ಭೇಟಿ, ತನಿಖೆ ತೀವ್ರ
India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ