ಇಲ್ಲಿನ ಮಸೀದಿಯಲ್ಲಿ ನಿತ್ಯ 5 ಬಾರಿ ಹಿಂದುಗಳ ನಮಾಜ್‌!

By Kannadaprabha NewsFirst Published Sep 9, 2019, 7:48 AM IST
Highlights

ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಮಸೀದಿ ಇದೆ. ಅಲ್ಲಿ ಹಿಂದುಗಳು ನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ! 200 ವರ್ಷಗಳಿಂದಲೂ ಗ್ರಾಮಸ್ಥರು ಮಸೀದಿ ನೋಡಿಕೊಳ್ಳುತ್ತಿದ್ದಾರೆ. 

ಪಟನಾ [ಸೆ.09]: ದೇಶದ ವಿವಿಧೆಡೆ ಧರ್ಮದ ಹೆಸರಿನಲ್ಲಿ ಆಗಾಗ್ಗೆ ಸಂಘರ್ಷ, ಗಲಭೆ ಸಾಮಾನ್ಯವಾಗಿರುವಾಗಲೇ ಸಾಮಾಜಿಕ ಹಾಗೂ ಧಾರ್ಮಿಕ ಸೌಹಾರ್ದ ಸಾರುವ ಸಂಪ್ರದಾಯವೊಂದು ಬಿಹಾರದಲ್ಲಿ ಪಾಲನೆಯಾಗುತ್ತಿದೆ. ಇಲ್ಲಿನ ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಮಸೀದಿ ಇದೆ. ಅಲ್ಲಿ ಹಿಂದುಗಳು ನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ!

ನಂಬಲು ತುಸು ಕಷ್ಟವಾದರೂ ಇದು ನಿಜ. ನಳಂದಾ ಜಿಲ್ಲೆಯ ಮಾಧಿ ಎಂಬ ಗ್ರಾಮದಲ್ಲಿ ಈ ಹಿಂದೆ ಸಾಕಷ್ಟುಸಂಖ್ಯೆಯಲ್ಲಿ ಮುಸ್ಲಿಮರು ನೆಲೆಸಿದ್ದರು. ಕಾಲ ಕಾಲಕ್ಕೆ ಅವರು ವಲಸೆ ಹೋಗಿದ್ದರಿಂದ ಮಾಧಿಯಲ್ಲಿ ಮುಸ್ಲಿಮರು ಇಲ್ಲ. ಆದರೆ 200 ವರ್ಷಗಳಷ್ಟುಹಳೆಯದಾದ ಮಸೀದಿ ಇದೆ. ಅದನ್ನು ಪಾಳು ಬೀಳದಂತೆ ನಿರ್ವಹಿಸುತ್ತಿರುವ ಹಿಂದುಗಳು ನಿತ್ಯ 5 ಬಾರಿ ತಾವೇ ನಮಾಜ್‌ ಮಾಡುತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೊಘಲ್ ವಂಶಸ್ಥನಿಂದ ಚಿನ್ನದ ಇಟ್ಟಿಗೆ!

ನಮಾಜ್‌ ಮಾಡುವಾಗ ಆಜಾನ್‌ ಕೇಳಬೇಕು ಎಂಬ ಕಾರಣಕ್ಕೆ ಪೆನ್‌ಡ್ರೈವ್‌ ಸಹಾಯದಿಂದ ರೆಕಾರ್ಡೆಡ್‌ ಆಜಾನ್‌ ಮೊಳಗಿಸುತ್ತಾರೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಹಿಂದುಗಳು ಈ ಮಸೀದಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಮಸೀದಿಯನ್ನು ಸ್ವಚ್ಛಗೊಳಿಸುತ್ತಾರೆ. ಸಮಸ್ಯೆ ಎದುರಾದಾಗ ಮಸೀದಿಗೆ ಹೋಗಿ ನಿವೇದಿಸಿಕೊಳ್ಳುತ್ತಾರೆ ಎಂದು ಗ್ರಾಮದ ಅರ್ಚಕ ಜಾನಕಿ ಪಂಡಿತ್‌ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಸ್ಲಿಮರು ಗ್ರಾಮ ತೊರೆದ ಬಳಿಕ ಮಸೀದಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಹಿಂದುಗಳೇ ಈ ಹೊಣೆ ಹೊತ್ತುಕೊಂಡಿದ್ದೇವೆ ಎಂದು ಮಸೀದಿಯನ್ನು ನಿರ್ವಹಿಸುತ್ತಿರುವ ಗೌತಮ್‌ ಎಂಬುವರು ಹೇಳಿದ್ದಾರೆ.

click me!