ಲಷ್ಕರೆ ಉಗ್ರ ಸಂದೀಪ್ ಕುಮಾರ್ ಶರ್ಮಾ ಪೊಲೀಸರ ಬಲೆಗೆ

By Suvarna Web DeskFirst Published Jul 10, 2017, 4:04 PM IST
Highlights

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತೋಯ್ಬಾಗೆ ಸಹಾಯ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ (ಜು.10): ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತೋಯ್ಬಾಗೆ ಸಹಾಯ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮುಜಾಫ್ಫರ್ ನಗರದ ನಿವಾಸಿ ಸಂದೀಪ್ ಕುಮಾರ್ ಶರ್ಮಾ ಬಂಧಿತ ಉಗ್ರಗಾಮಿ. ಈತ ಲಷ್ಕರೆ ತೋಯ್ಬಾ ಸಂಘಟನೆಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಸಂದೀಪ್ ಕುಮಾರ್ ಬಂಧನದಿಂದ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾಶ್ಮೀರಿಯೇತರರ ಮೇಲೆ ಪೊಲೀಸರು ಕಣ್ಗಾವಲಿಟ್ಟಿದ್ದಾರೆ.

ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳಿಂದ ಲಕ್ಷಾಂತರ  ಕೂಲಿಕಾರ್ಮಿಕರು ದಿನಗೂಲಿಗಾಗಿ ಕಾಶ್ಮೀರಕ್ಕೆ ಬಂದಿದ್ದಾರೆ.  ಇದೀಗ ಶರ್ಮಾ ಬಂಧನದಿಂದಾದಿ ಹೊರ ರಾಜ್ಯಗಳಿಂದ ಬರುವ ಪ್ರತಿಯೊಬ್ಬರ ಮೇಲೂ ನಿಗಾ ಇಡಲು ಶುರು ಮಾಡುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಂದೀಪ್ ಶರ್ಮಾ ಇದೊಂದೇ ಪ್ರಕರಣದಲ್ಲಿ ಅಲ್ಲ, ಪೊಲೀಸ್ ಅಧಿಕಾರಿಗಳ ಹತ್ಯೆ, ಸೇನಾ ಬೆಂಗಾವಲ ಪಡೆಗಳ ಮೇಲೆ ದಾಳಿ, ಆಯುಧಗಳನ್ನು ಕಸಿದುಕೊಂಡು ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿರುವ ಬ್ಯಾಂಕ್ ದರೋಡೆ, ಲಷ್ಕರೆ ತೋಯ್ಬಾಗೆ ಹಣ ಹೊಂದಿಸುವುದು ಪ್ರಕರಣವೂ ಇವರ ಮೇಲೆ ದಾಖಲಾಗಿದೆ.  

click me!