
ನವದೆಹಲಿ : ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಆ.15ಕ್ಕೆ 70 ವಸಂತ ಪೂರ್ಣಗೊಳ್ಳಲಿರುವ ಸಂದರ್ಭದಲ್ಲಿ ವಿಶ್ವಾದಾದ್ಯಂತ ಅದ್ದೂರಿಯಾಗಿ 7 ದಿನ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಭರದ ತಯಾರಿ ನಡೆಸಿದೆ.
ಜಗತ್ತಿನಾದ್ಯಂತ ಅನಿವಾಸಿ ಭಾರತಿಯರಿಂದ ಮೆರವಣಿಗೆ, ವಿಶ್ವದ ಆಯ್ದ ದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಯೋಜಿಸುವುದರ ಜತೆಗೆ ದೇಶದಲ್ಲಿ ಸ್ವಾತಂತ್ರ್ಯ ಕುರಿತು ವಿಶೇಷ ವಸ್ತು ಪ್ರದರ್ಶನ ರೈಲುಗಳನ್ನು ಓಡಿಸುವುದು, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಪ್ರಾದೇಶಿಕ ಭಾಷೆಗಳಲ್ಲಿ ಘೋಷಣೆ ಬಿಡುಗಡೆ ಕುರಿತು ಪ್ರಯತ್ನ ನಡೆಯುತ್ತಿದೆ.
ಸ್ವತಂತ್ರ ಭಾರತದ 70 ವರ್ಷಗಳು ಎಂಬ ವಿಚಾರವಾಗಿ ಭಾರತೀಯ ರೈಲ್ವೇ ಆ. 15 ರಿಂದ 5 ದಿನಗಳ ಕಾಲ ವಸ್ತು ಪ್ರದರ್ಶನ ರೈಲು ಓಡಸಲು ಉದ್ದೇಶಿಸಿದೆ.
ಮಾನವ ಸಂಪನ್ಮೂಲ ಸಚಿವಾಲಯವು ಆ.14ರಿಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲು ಶಾಲೆಗಳು ಹಾಗೂ ಇತರೆ ಸಂಘಟನೆಗಳಿಗೆ ಸೂಚಿಸಲು ಮುಂದಾಗಿದೆ.
ಅಮೆರಿಕಾ, ಬ್ರೆಝಿಲ್, ವಿಯೆಟ್ನಾಂ, ಜಪಾನ್, ಚಿಲಿ, ಒಮಾನ್ ಹಾಗೂ ಸ್ಪೇನ್’ನಂತಹ ಆಯ್ದ ರಾಷ್ಟ್ರಗಳಿಗೆ ಭಾರತೀಯ ಕಲಾವಿದರನ್ನು ಕಳುಹಿಸಿ, ರಾಸಲೀಲಾ, ಕುಚಿಪುಡಿ, ನೃತ್ಯ ನಾಟಕ ಹಾಗೂ ಜಾನಪದ ಕಲೆಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವಾಲಯಗಳು ತಯಾರಿ ನಡೆಸಿವೆ.
ಎನ್’ಆರ್’ಐಗಳ ಮೆರವಣಿಗೆ
ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮೂಲಕ ಆ.15ರಂದು ವಿಶ್ವಾದ್ಯಂತ ಮೆರವಣಿಗೆ ನಡೆಸಲು ವಿದೇಶಾಂಗ ಸಚಿವಾಲಯ ಪ್ರಯತ್ನ ನಡೆಸಿದ್ದು, ಈ ಸಂಬಂಧ ವಿವಿಧ ದೇಶಗಳ ಅನುಮತಿ ಪಡೆಯಲು ಮುಂದಾಗಿದೆ.
ಸ್ವಾತಂತ್ರ್ಯೋತ್ಸವವನ್ನು ರಾಯಭಾರ ಕಚೇರಿಗಷ್ಟೇ ಮೀಸಲಾಗಿರಿಸದೇ ಹೊರಗೂ ಆಚರಿಸಬೇಕೆಂದು ಸೂಚನೆ ನೀಡಲಾಗಿದೆ. ಈ ಮಧ್ಯೆ, ದೆಹಲಿಯ ರಾಜಫಥದಲ್ಲಿ ನೃತ್ಯ, ಜಾನಪದ ಗೀತೆ ಹಾಗೂ ಎಲ್ಲ ರಾಜ್ಯಗಳ ವಿಶೇಷ ಖಾದ್ಯಗಳನ್ನು ಪ್ರದರ್ಶಿಸುವ ‘ಭಾರತ ಪರ್ವ’ ಕಾರ್ಯಕ್ರಮ ಏರ್ಪಾಡು ಮಾಡುವ ಆಲೋಚನೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.