
ಶಿಮ್ಲಾ[ಆ.31]: ವೈವಾಹಿಕ, ಮತ ಪರಿವರ್ತನೆಗೆ ಉತ್ತೇಜನ ಅಥವಾ ಇನ್ನಿತರ ಮಾರ್ಗದ ಮೂಲಕ ವ್ಯಕ್ತಿಯೋರ್ವನನ್ನು ಬಲವಂತವಾಗಿ ಧರ್ಮಾಂತರಗೊಳಿಸುವುದನ್ನು ಅಪರಾಧ ಎಂದು ಸಾರುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದೆ.
ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾದ ಹಿಮಾಚಲ ಪ್ರದೇಶ ಧಾರ್ಮಿಕ ಹಕ್ಕು-2019 ವಿದೇಯಕಕ್ಕೆ ಪ್ರತಿಪಕ್ಷದ ಬೆಂಬಲವೂ ವ್ಯಕ್ತವಾಯಿತು. ಹೀಗಾಗಿ ಇನ್ನು ಇಂಥ ಕೃತ್ಯಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಜೈರಾಂ ಠಾಕೂರ್, ‘ಬಲವಂತದ ಧರ್ಮ ಪರಿವರ್ತನೆಗಳ ವಿರುದ್ಧ ಕಠಿಣ ಕಾನೂನಿನ ಅಗತ್ಯವಿತ್ತು’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.