ಅತೀ ಹೆಚ್ಚು ತೆರಿಗೆ ಪಾವತಿಸಿದ ಚಿತ್ರ ತಾರೆಯರು : ಕನ್ನಡತಿ ಎಷ್ಟು ಕಟ್ಟಿದರು ಗೊತ್ತೆ ?

Published : Dec 23, 2016, 01:01 PM ISTUpdated : Apr 11, 2018, 12:56 PM IST
ಅತೀ ಹೆಚ್ಚು ತೆರಿಗೆ ಪಾವತಿಸಿದ  ಚಿತ್ರ ತಾರೆಯರು : ಕನ್ನಡತಿ ಎಷ್ಟು ಕಟ್ಟಿದರು ಗೊತ್ತೆ ?

ಸಾರಾಂಶ

2016ರ ಟ್ಯಾಕ್ಸ್​​ನ್ನು ಮುಂಗಡವಾಗಿಯೇ ಪಾವತಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ.

ಮೋದಿ ಡೀಮಾನಿಟೈಸೇಷನ್ ಸರಿಯಾಗಿ ವರ್ಕೌಟ್ ಆದಂತಿದೆ. ಬಾಲಿವುಡ್ ತಾರೆಯರು ನಿಜಕ್ಕೂ ಎಚ್ಚೆತ್ತುಕೊಂಡಿದ್ದಾರೆ. 2016ರ ಟ್ಯಾಕ್ಸ್​​ನ್ನು ಮುಂಗಡವಾಗಿಯೇ ಪಾವತಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಯರ ವ್ಯವಹಾರ ಗೊತ್ತಲ್ವಾ ಕೋಟಿಗಳಲ್ಲಿ ನಡೆಯುತ್ತೆ. ಹಾಗೆ ತೆರಿಗೆ ಕಟ್ಟಿದ್ದೂ ಕೋಟಿಗಳಲ್ಲೆ. ಬಿಟೌನ್​ನಲ್ಲಿ 2016ರಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ 5 ಜನ ತಾರೆಯರು ಹೀಗಿದ್ದಾರೆ.

ನಂ.1 ಸ್ಥಾನದಲ್ಲಿ ಹೃತಿಕ್ ರೋಷನ್ !

ಬಾಲಿವುಡ್ ಗ್ರೀಕ್'ಗಾಡ್  ಹೃತಿಕ್ ರೋಷನ್  ಮುಂಗಡವಾಗಿ 80 ಕೋಟಿ ತೆರಿಗೆ ಪಾವತಿಸಿ 2016ರಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಂ.1 ಬಾಲಿವುಡ್ ನಟ ಎನ್ನಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಆದಾಯ 1500 ಪರ್ಸೆಂಟ್ ಗ್ರಾಸ್ ಹಿಂದಿನ ವರ್ಷಕ್ಕಿಂತ ಜಾಸ್ತಿಯಾಗಿದೆ. 2015ರಲ್ಲಿ ಹೃತಿಕ್ ಕಟ್ಟಿದ್ದು  50 ಕೋಟಿ. ಈ ಬಾರಿ 80 ಕೋಟಿ ಟ್ಯಾಕ್ಸ್ ಕಟ್ಟಿ ಅಚ್ಚರಿಮೂಡಿಸಿದ್ದಾರೆ.

74 ಕೋಟಿ ಟ್ಯಾಕ್ಸ್ ಕಟ್ಟಿದ ಅಮೀರ್ ಖಾನ್!

ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ನಟ ನಿರ್ಮಾಪಕ ಕೂಡ ಹೌದು. ಈ ವರ್ಷ ಮುಂಗಡವಾಗಿ 74 ಕೋಟಿ ತೆರಿಗೆ ಪಾವತಿಸಿ 2016ರ ಅತಿಹೆಚ್ಚು ತರಿಗೆ ಪಾವತಿಸಿದ ನಟರಲ್ಲಿ 2ನೇ ಸ್ಥಾನ ಗಿಟ್ಟಿಸಿದ್ದಾರೆ.  ಇನ್'ಕಮ್ ಟ್ಯಾಕ್ಸ್ ಡಿಪಾರ್ಟ್​ಮೆಂಟ್​ಗೆ ಈಗಾಗಲೇ ಕಟ್ಟಿಬಂದಿದ್ದಾರೆ ಮಿಸ್ಟರ್ ದಂಗಲ್.

3ನೇ ಸ್ಥಾನದಲ್ಲಿ ರಾಕ್ ಸ್ಟಾರ್ ರಣ್ಬೀರ್ !

ರಾಕ್'ಸ್ಟಾರ್ ರಣ್​ಬೀರ್ ಕಪೂರ್  37 ಕೋಟಿ ತೆರಿಗೆ ಕಟ್ಟೋ ಮೂಲಕ ಈ ವರ್ಷ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ನಟರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

4ನೇ ಸ್ಥಾನದಲ್ಲಿ ಸುಲ್ತಾನ್!

ಸಲ್ಮಾನ್ ಖಾನ್ ಹಿಂದಿನ ವರ್ಷ 11ಕೋಟಿ ತೆರಿಗೆ ಕಟ್ಟಿದ್ದರು. ಈ ವರ್ಷ 16 ಕೋಟಿ ಇನ್ ಕಮ್ ಟ್ಯಾಕ್ಸ್ ಕಟ್ಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

5ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್

ಬಾಲಿವುಡ್​ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್  ಅಚ್ಚರಿ ಎನ್ನುವಂತೆ ಹಿಂದಿನ ವರ್ಷ 18 ಕೋಟಿ ತೆರಿಗೆ ಕಟ್ಟಿ ಈ ವರ್ಷ 10 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ. ಈ ಮೂಲಕ 5 ನೇ ಸ್ಥಾನದಲ್ಲಿದ್ದಾರೆ

ಇನ್ನು ದೀಪಿಕಾ ಪಡುಕೋಣೆ ಮೂರು ಕೋಟಿ ತೆರಿಗೆ ಕಟ್ಟಿದ್ದಾರೆ. ಒಟ್ಟಾರೆ ಬಾಲಿವುಡ್ ನ  ಒಂದಷ್ಟು ತಾರೆಯರು ಅಡ್ವಾನ್ಸ್​ ಆಗಿ ತೆರಿಗೆ ಕಟ್ಟಿ ಆದಾಯ ತೆರಿಗೆ ಇಲಾಖೆಯಿಂದ ಪ್ರಶಂಸೆಗಿಟ್ಟಿಸಿದ್ದಾರೆ.

ಸುಗುಣ, ಎಂಟರ್ಟೈನ್ಮೆಂಟ್ ಬ್ಯೂರೋ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ