
ನವದೆಹಲಿ(ಡಿ.23): ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ನೋಟ್ ಬ್ಯಾನ್ ಮಾಡಿ 45 ವದಿನಗಳು ಕಳೆದಿವೆ. ಆದರೆ, ಹೊಸ ನೋಟು ಪಡೆಯಲು ಜನರ ಪರದಾಟ ಮಾತ್ರ ನಿಂತಿಲ್ಲ. ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಕ್ಯೂ ನಿಂತು ಸುಸ್ತಾಗಿದ್ಧಾರೆ. ಇದರ ಜೊತೆಗೆ 2000 ರೂ. ನೋಟ್ ಬಿಡುಗಡೆ ಬಗ್ಗೆಯೂ ಅಪಸ್ವರವಿದೆ. ಈ ದೊಡ್ಡ ನೋಟಿಗೆ ಚಿಲ್ಲರೆ ಎಲ್ಲಿಂದ ತರೋದು ಅಂತಾ ಜನ ಕೇಳುತ್ತಿದ್ದಾರೆ. ಇದಕ್ಕಿಂತ ಶಾಕಿಂಗ್ ನ್ಯೂಸ್ ಇಲ್ಲಿದೆ ನೋಡಿ. ಭಾರತದಲ್ಲಿ ಈ ಹಿಂದೆ 10000 ರೂಪಾಯಿ ನೋಟ್ ಬಿಡುಗಡೆ ಆಗಿತ್ತಂತೆ.
ಭಾರತ ಮೂಲದ ದುಬೈನಲ್ಲಿ ನೆಲೆಸಿರುವ ರಾಮ್ ಕುಮಾರ್ ಎಂಬುವವರ ಬಳಿ ಈ 10 ಸಾವಿರ ರೂಪಾಯಿಯ ನೋಟಿದೆ. ಕಪ್ಪು ಹಣ ಬೇಟೆಗೆ 346 ನೋಟುಗಳನ್ನ ಮಾತ್ರ ಚಲಾವಣೆ ತಂದಿದ್ದ ಸರ್ಕಾರ ಆ ಬಳಿಕ ಹಿಂಪಡೆದಿದ್ದು, ಒಂದು ನೋಟ್ ಮಾತ್ರ ಈ ವ್ಯಕ್ತಿ ಬಳಿ ಉಳಿದುಕೊಂಡಿದೆ ಎಂದು ಇಂಡಿಯನ್ ಎಕ್ಸ್`ಪ್ರೆಸ್ ವರದಿ ಮಾಡಿದೆ. ರಾಮ್ ಕುಮಾರ್ ದುಬೈನ ನುಮಿಸ್ಬಿಂಗ್ ಕಂಪನಿಯ ಸಂಸ್ಥಾಪಕರಾಗಿದ್ಧಾರೆ.
ರಿಸರ್ವ್ ಬ್ಯಾಂಕ್ ಅಂಕಿ ಅಂಶದ ಪ್ರಕಾರ 1978ರಲ್ಲಿ ಕೇವಲ 10 ಸಾವಿರ ಮುಖಬೆಲೆಯ 346 ನೋಟುಗಳು ಮಾತ್ರ ಚಲಾವಣೆಯಲ್ಲಿದ್ದವು ಎಂದು ಗಲ್ಫ ನ್ಯೂಸ್ ವರದಿ ಮಾಡಿರುವುದಾಗಿ ಇಂಡಿಯನ್ ಎಕ್ಸ್`ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ, 10 ಸಾವಿರ ಮುಖಬೆಲೆಯ 10 ನೋಟುಗಳು ಮಾತ್ರವಿದ್ದು, ಒಂದು ನೋಟ್ ರಾಮ್ ಕುಮಾರ್ ಬಳಿ ಇದೆ. ಇದನ್ನ ದೋಹಾ ಸೆಂಟರ್`ನ ಅಲ್ ಮ್ಯಾಕ್ ಟೌಮ್ ಸ್ಟ್ರೀಟ್`ನ ನುಮಿಸ್ಬಿಂಗ್ ಶೋರೂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.