ಅರ್ಚಕರಿಗೆ 70,000 ರು. ವರೆಗೂ ಭರ್ಜರಿ ವೇತನ ಏರಿಕೆ

By Suvarna Web DeskFirst Published Mar 14, 2018, 12:11 PM IST
Highlights

ತೆಲಂಗಾಣ ಸರ್ಕಾರ ದೇವಾಲಯಗಳ ಅರ್ಚಕರ ವೇತನವನ್ನು ಭಾರಿ ಪ್ರಮಾಣದಲ್ಲಿ ಏರಿಸಿದೆ. 640 ದೇವಾಲಯಗಳ ಸುಮಾರು 4,800 ಅರ್ಚಕರು ಮತ್ತು ಆಡಳಿತ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ತೆಲಂಗಾಣ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೈದರಾಬಾದ್‌: ತೆಲಂಗಾಣ ಸರ್ಕಾರ ದೇವಾಲಯಗಳ ಅರ್ಚಕರ ವೇತನವನ್ನು ಭಾರಿ ಪ್ರಮಾಣದಲ್ಲಿ ಏರಿಸಿದೆ. 640 ದೇವಾಲಯಗಳ ಸುಮಾರು 4,800 ಅರ್ಚಕರು ಮತ್ತು ಆಡಳಿತ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ತೆಲಂಗಾಣ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೀಗಾಗಿ ಅರ್ಚಕರು ತಮ್ಮ ಹಿರಿತನಕ್ಕೆ ತಕ್ಕಂತೆ ಸರ್ಕಾರಿ ನೌಕರರ ರೀತಿಯಲ್ಲಿ 20,000 ರು.ನಿಂದ 70,000 ರು.ವರೆಗೂ ವೇತನವನ್ನು ಪಡೆಯಲಿದ್ದಾರೆ.

ಮುಜರಾಯಿ ಇಲಾಖೆ ಈ ಮುನ್ನ 790 ಅರ್ಚಕರು ಮತ್ತು ದೇವಾಲಯ ಆಡಳಿತ ಸಿಬ್ಬಂದಿಯ ವೇತನವನ್ನು ಡಿಸೆಂಬರ್‌ನಲ್ಲಷ್ಟೇ ಏರಿಕೆ ಮಾಡಿತ್ತು. ಇದೀಗ ಮಾಚ್‌ರ್‍ನಿಂದ ಅನ್ವಯವಾಗುವಂತೆ 4,800 ಅರ್ಚಕರ ವೇತನವನ್ನು ಏರಿಕೆ ಮಾಡಲಾಗಿದೆ.

click me!