ಕನ್ನಡಿಗನಿಂದ ವಿನೂತನ ‘ಹೈ ವೈಟ್ ಬ್ರಷ್’

By Suvarna Web DeskFirst Published Mar 4, 2018, 1:03 PM IST
Highlights

ಹಲ್ಲಿಗೆ ಬ್ರಷ್ ಇಟ್ಟು ಮೇಲೆ ಕೆಳಗೆ ಉಜ್ಜುವುದು ಸರಿಯಾದ ಕ್ರಮ. ಆದರೆ, ಬಹುತೇಕರು ಹಲ್ಲಿನ ಹಿಂದೆ ಮತ್ತು ಮುಂದೆ ಉಜ್ಜುತ್ತಾರೆ

ಬೆಂಗಳೂರು(ಮಾ.04): ನೇರವಾಗಿ ಉಜ್ಜಿದರೂ, ಎಲ್ಲಾ ದಿಕ್ಕುಗಳಲ್ಲೂ ತಿರುಗಿ ಹಲ್ಲು ಹಾಗೂ ವಸಡುಗಳನ್ನು ಸಾಧ್ಯಂತವಾಗಿ ಸ್ವಚ್ಛಗೊಳಿಸುವ ಬ್ರಷ್‌ವೊಂದು ಆವಿಷ್ಕಾರಗೊಂಡಿದೆ.

ಈ ಸ್ವದೇಶಿ ಬ್ರಷ್‌ಅನ್ನು ಸಂಶೋಧಕ ಕನ್ನಡಿಗ ಪ್ರಕಾಶ ಅರಸ್. ಹಲ್ಲುಗಳು ಮತ್ತು ವಸಡಿನ ಆರೋಗ್ಯ ಕಾಪಾಡಿಕೊಳ್ಳಲು ಟೂತ್ ಬ್ರಷ್ ಬಹುಮುಖ್ಯ. ದಂತ ವೈದ್ಯರ ಪ್ರಕಾರ ಜಗತ್ತಿನ ಶೇ.95ರಷ್ಟು ಮಂದಿ ಟೂತ್ ಬ್ರಷ್‌ಗಳನ್ನು ಸರಿಯಾದ ಕ್ರಮದಲ್ಲಿ ಬಳಸುತ್ತಿಲ್ಲ. ಹಲ್ಲಿಗೆ ಬ್ರಷ್ ಇಟ್ಟು ಮೇಲೆ ಕೆಳಗೆ ಉಜ್ಜುವುದು ಸರಿಯಾದ ಕ್ರಮ. ಆದರೆ, ಬಹುತೇಕರು ಹಲ್ಲಿನ ಹಿಂದೆ ಮತ್ತು ಮುಂದೆ ಉಜ್ಜುತ್ತಾರೆ. ಇದರಿಂದ ಹಲ್ಲು ಹಾಗೂ ವಸಡುಗಳು ಪೂರ್ಣ ಪ್ರಮಾಣದಲ್ಲಿ ಸ್ವಚ್ಛವಾಗುವುದಿಲ್ಲ. ಈ  ಕ್ರಮದಿಂದ ವಸಡಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಳಕೆ ಸ್ನೇಹಿಯಾದ ‘ಹೈ ವೈಟ್’ ಹೆಸರಿನ ಬ್ರಷ್ ಆವಿಷ್ಕರಿಸಿದ್ದೇನೆ ಎಂದು ಸಂಶೋಧಕ ಪ್ರಕಾಶ್ ಅರಸ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ಬ್ರಷ್ ಹಲ್ಲಿನ ಮೇಲಿಟ್ಟು ಹಿಂದೆ-ಮುಂದೆ ಚಲಿಸಿದರೂ ಅದು ಮೇಲೆ ಕೆಳಗೆ ಹಾಗೂ ಹಲ್ಲಿನ ಸಂದುಗಳಲ್ಲಿ ಸ್ವಚ್ಛ ಮಾಡುತ್ತದೆ. ಜೊತೆಗೆ ಬಾಯಿಯ ಒಳಭಾಗದ ವಸಡಿನ ಸ್ವಚ್ಚತೆಯೂ ಸುಲಭವಾಗುತ್ತದೆ. ಯಾವುದೇ ಕಾರಣಕ್ಕೂ ಹಲ್ಲು ಸವೆಯುವುದಿಲ್ಲ. ಈ ಬ್ರಷ್‌ನ ಮತ್ತೊಂದು ವಿಶೇಷವೆಂದರೆ, ಆಗಾಗ ಬ್ರಷ್ ಹೆಡ್ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಬ್ರಷ್ ಹೆಡ್ ಬದಲಾಯಿಸಿದರೂ ಒಂದೂವರೆ ವರ್ಷ ಈ ಬ್ರಷ್ ಬಳಸಬಹುದು ಎಂದು ಹೇಳಿದರು.

ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಪ್ರಕಾಷ್ ಅರಸ್ ಅವರು ನಗರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕಳೆದ 15 ವರ್ಷಗಳಿಂದ ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಆಟೋಮೊಬೈಲ್ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು 9 ಪೇಟೆಂಟ್ ಪಡೆದಿದ್ದಾರೆ. ಈ ನೂತನ ಟೂತ್ ಬ್ರಷ್ ಆವಿಷ್ಕಾರವನ್ನು ಖ್ಯಾತ ಇಂಜಿನಿಯರ್ ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಅರ್ಪಿಸುವುದಾಗಿ ಪ್ರಕಾಶ್ ಹೇಳುತ್ತಾರೆ.

click me!