
ವಾಷಿಂಗ್ಟನ್(ಮೇ.04): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮಿಶೆಲ್‌ರನ್ನು ವಿವಾಹವಾಗುವ ಮುನ್ನ ಬೇರೆ ಮಹಿಳೆಯೊಬ್ಬರೊಂದಿಗೆ ಗಾಢವಾದ ಸಂಬಂಧ ಹೊಂದಿದ್ದರು ಎಂಬ ಅಪರೂಪದ ವಿಚಾರದ ಬೆಳಕಿಗೆ ಬಂದಿದೆ.
ಒಬಾಮಾ, ಶೀಲಾ ಮಿಯೋಶಿ ಜಗರ್ ಎಂಬ ಯುವತಿಯ ಪ್ರೀತಿಯ ಬಲೆಗೆ ಸಿಲುಕಿದ್ದರು. ಈ ವೇಳೆ ಅವರಿಬ್ಬರು ಅಮೆರಿಕದ ಷಿಕಾಗೊ ನಗರದಲ್ಲಿ ವಾಸವಾಗಿದ್ದರು ಎಂಬ ಅಂಶವನ್ನು ಡೇವಿಡ್ ಜೆ. ಗಾರ್ವರೊ ಅವರು ಬರೆದ ‘ರೈಸಿಂಗ್ ಸ್ಟಾರ್: ದ ಮೇಕಿಂಗ್ ಆ್ ಬರಾಕ್ ಒಬಾಮ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
‘1986ರ ಒಂದು ಚಳಿಗಾಲದಲ್ಲಿ ನಮ್ಮ ಮನೆಗೆ ಬಂದಿದ್ದ ಒಬಾಮಾ, ನನ್ನ ಪೋಷಕರ ಬಳಿ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಆದರೆ, ನಾನು ಒಬಾಮಾಗಿಂತ 2 ವರ್ಷ ಸಣ್ಣವಳಾಗಿದ್ದರಿಂದ ನನ್ನ ಪೋಷಕರು ಈ ಪ್ರಸ್ತಾಪ ತಿರಸ್ಕರಿಸಿದ್ದರು,’ ಎಂಬ ವಿಚಾರವನ್ನು ಜಗರ್ ಅವರು ಲೇಖಕ ಗಾರ್ವರೊ ಅವರಿಗೆ ಹೇಳಿದ್ದಾರೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
‘ಪೋಷಕರ ವಿರೋಧದ ನಡುವೆಯೂ ಇಬ್ಬರ ಪ್ರೇಮ ಕಥೆ ಮುಂದುವರಿದಿತ್ತು. ಆದರೆ, ಆ ಬಳಿಕ ಒಬಾಮಾ ರಾಜಕೀಯ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಒಬಾಮಾ ಕಾನೂನು ಪದವಿಗಾಗಿ ಹಾರ್ವರ್ಡ್ ಕಾನೂನು ಶಾಲೆಗೆ ತೆರಳುವ ವೇಳೆಯೂ ತನ್ನನ್ನು ವಿವಾಹವಾಗುವಂತೆ ಪೀಡಿಸಿದ್ದರು. ಆದರೆ, ಮೊದಲ ವರ್ಷದ ಕಾನೂನು ಪದವಿ ಪೂರ್ಣದ ಬಳಿಕ ಷಿಕಾಗೊ ನಗರಕ್ಕೆ ಆಗಮಿಸಿದ ಒಬಾಮಾಗೆ ಮಿಶೆಲ್ ರಾಬಿನ್ಸನ್ ಪರಿಚಯವಾಯಿತು. ಮುಂದೆ ಅವರ ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರೂ ವಿವಾಹವಾದರು’ ಎಂದು ಜಗರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.