
ಚೆನ್ನೈ(ಅ.15): ಗಿಡಮೂಲಿಕೆಗಳಿಂದ ಪೆಟ್ರೋಲ್ ಉತ್ಪಾದಿಸುತ್ತೇನೆ ಎಂದು 1996ರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ರಾಮರ್ ಪಿಳ್ಳೆಗೆ ಮೂರು ವರ್ಷ ಜೈಲು ಶಿಕ್ಷೆ ವಿಸಲಾಗಿದೆ. ಚೆನ್ನೈನ ಎಗ್ಮೋರ್‌ನಲ್ಲಿರುವ ಸಿಬಿಐನ ವಿಶೇಷ ಕೋರ್ಟ್ ಶುಕ್ರವಾರ ಈ ತೀರ್ಪು ನೀಡಿದೆ. ಟ್ಯಾಲ್ಯುವಿನ್ (ಸುವಾಸನೆಯ ಹೈಡ್ರೋಕಾರ್ಬನ್) ಮತ್ತು ನ್ತಾಲದಿಂದ ಹರ್ಬಲ್ ಪೆಟ್ರೋಲ್ ನೀಡುವ ವಾಗ್ದಾನ ಮಾಡಿ ಸಾರ್ವಜನಿಕರಿಂದ 2.27 ಕೋಟಿಗಿಂತಲೂ ಅಕ ಮೊತ್ತ ಸಂಗ್ರಹಿಸಿದ್ದ ಎಂಬ ಆರೋಪ ಪಿಳ್ಳೆ ಮೇಲೆ ಹೊರಿಸಲಾಗಿತ್ತು. ಪಿಳ್ಳೆ ಜತೆಗೆ ಆತನ ಸಂಬಂಕರಾಗಿರುವ ಆರ್.ವೇಣುದೇವಿ, ಎಸ್.ಚಿನ್ನಸ್ವಾಮಿ ಮತ್ತು ಆರ್.ರಾಸೇಗರನ್ ಮತ್ತು ಎಸ್.ಕೆ.ಭರತ್ ಅವರು ಈ ವಂಚನೆಯ ಜಾಲದಲ್ಲಿ ಪಿಳ್ಳೆಗೆ ಸಹಕರಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಐವರಿಗೆ ತಲಾ 6 ಸಾವಿರ ದಂಡ ವಿಸಿ ಕೋರ್ಟ್ ಆದೇಶ ನೀಡಿದೆ.
ರಾಮರ್ ಪೆಟ್ರೋಲ್ ಹೆಸರಲ್ಲಿ ಅವರು ಹಣ ಸಂಗ್ರಹಿಸಿದ್ದರು. ರಾಮರ್ ಕೈಗೊಂಡಿದ್ದ ಸಂಶೋಧನೆ 1988ರ ಮೋಟಾರ್ ಸ್ಪಿರಿಟ್ ಸ್ಪೀಡ್ ಸ್ಪೀಡ್ ಡೀಸೆಲ್ (ರೆಗ್ಯುಲೇಷನ್ ಆ್ ಸಪ್ಲೈ ಆ್ಯಂಡ್ ಡಿಸ್ಟ್ರಿಬ್ಯೂಷನ್ ಆ್ಯಂಡ್ ಪ್ರಿವೆನ್ಶನ್ ಆ್ ಮಾಲ್‌ಪ್ರಾಕ್ಟೀಸಸ್ ) ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಪಿಳ್ಳೆ ಹರ್ಬಲ್ ಪೆಟ್ರೋಲ್ ನೆಪದಲ್ಲಿ ಸಾವಿರಾರು ರುಪಾಯಿ ಸಂಗ್ರಹಿಸಿದ್ದರು ಎಂದು ಆಪಾದಿಸಿತ್ತು. 2 ಸಾವಿರನೇ ಇಸ್ವಿಯಲ್ಲಿ ಆತನನ್ನು ಬಂಸಲಾಗಿತ್ತು. ಇದಾಗಿ ಹತ್ತು ವರ್ಷಗಳ ಬಳಿಕ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಹೊಸ ಮಾದರಿಯ ಪೆಟ್ರೋಲ್ ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ 1996ರಲ್ಲಿದ್ದಂತೆ ಹವಾ ಕಂಡುಬಂದಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.