
ಇಸ್ಲಾಮಾಬಾದ್(ಆ.30): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಒಂದೆಡೆ ಸರ್ಕಾರದಲ್ಲಿ ವೆಚ್ಚ ಕಡಿತದ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಪ್ರಧಾನಿ ಕಚೇರಿಯಿಂದ ಬನಿಗಾಲಾದಲ್ಲಿರುವ ಸ್ವಂತ ಮನೆಗೆ ತೆರಳಲು ಸರ್ಕಾರಿ ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಇದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.
ತಮ್ಮ ಪತ್ನಿ ಬುಶ್ರಾ ಮನೇಕಾ ಅವರ ಜತೆಗೂಡಿ ಇಮ್ರಾನ್ ಅವರು, ಕಚೇರಿಯಿಂದ ಕೆಲವೇ ಕಿ.ಮೀ. ಅಂತರದಲ್ಲಿರುವ ಮನೆಗೆ ತೆರಳಲು ಇಮ್ರಾನ್ ಹೆಲಿಕಾಪ್ಟರ್ ಬಳಸಿದ್ದರು.
ಇದನ್ನೂ ಓದಿ:ಬಂಗಲೆ, ಸೇವಕರು, ಕಾರು ಬೇಡ ಎಂದ ಇಮ್ರಾನ್ ಖಾನ್
ಆದರೆ ಹೆಲಿಕಾಪ್ಟರ್ ಬಳಕೆಯನ್ನು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷ ಸಮರ್ಥಿಸಿಕೊಂಡಿದೆ. ಇಮ್ರಾನ್ ಖಾನ್ ಹೆಲಿಕಾಪ್ಟರ್‌ನಲ್ಲಿ ಮೂರು ನಿಮಿಷದಲ್ಲಿ ತಮ್ಮ ಕಚೇರಿಯಿಂದ ಮನೆಗೆ ಹೋಗುತ್ತಾರೆ. ಅದೇ ರಸ್ತೆ ಮಾರ್ಗದ ಮೂಲಕ ಹೋಗಲು ಅವರ ಕಾರಿನ ಜೊತೆ ಭದ್ರತೆಗೆ 5ರಿಂದ 7 ಬೆಂಗಾವಲು ವಾಹನಗಳು ಬೇಕಾಗುತ್ತವೆ. ಇವುಗಳಿಗೆ ಬಳಸುವ ಇಂಧನದ ವೆಚ್ಚವನ್ನು ಲೆಕ್ಕಹಾಕಿದರೆ ಹೆಲಿಕಾಪ್ಟರ್‌ನಲ್ಲಿ ಹೋಗುವುದೇ ಅಗ್ಗ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಗೆ ಕುರ್ಚಿ ಸಿಕ್ಕಿದ್ದೇ ತಡ : ಪಾಕ್ ಅಧಿಕಾರಿಗಳು ಗಡಗಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.