ಭಾರೀ ಮಳೆ : ಕರಾವಳಿ ನಗರಗಳಿಗೆ ಮುಳುಗಡೆ ಭೀತಿ

Published : Sep 21, 2018, 12:51 PM ISTUpdated : Sep 21, 2018, 04:12 PM IST
ಭಾರೀ ಮಳೆ : ಕರಾವಳಿ ನಗರಗಳಿಗೆ ಮುಳುಗಡೆ ಭೀತಿ

ಸಾರಾಂಶ

ಕೊಡಗು ಹಾಗೂ ಕೇರಳದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ ಬೆನ್ನಲ್ಲೇ ಇದೀಗ ಮತ್ತೆರಡು ರಾಜ್ಯಗಳಿಗಳಿಗೂ ಪ್ರವಾಹದ ಆತಂಕ ಎದುರಾಗಿದೆ. ಈಗಾಗಲೇ ಒಡಿಶಾ ಹಾಗೂ  ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ತಟ್ಟಿದ್ದು ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. 

ಬೆಂಗಳೂರು :  ಕರ್ನಾಟಕದ ಕೊಡಗು ಸೇರಿದಂತೆ ಇತರ ಭಾಗಗಳು ಮತ್ತು ಕೇರಳಲ್ಲಿ ಭಾರೀ ನೆರೆಯಿಂದ ತತ್ತರಿಸಿದ ಬೆನ್ನಲ್ಲೇ, ಗುರುವಾರ ರಾತ್ರಿ ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಗೆ ಚಂಡ ಮಾರುತ ಅಪ್ಪಳಿಸಿದೆ.

 ಇದರಿಂದ ಒಡಿಶಾದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇನ್ನೂ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅದಿಕಾರಿಗಳು ಎಚ್ಚರಿಕೆ ನಿಡಿದ್ದಾರೆ. 

ಅತ್ಯಧಿಕ ವೇಗದಲ್ಲಿ ಗಾಳಿ ಬೀಸುತ್ತಿದ್ದು ಕರಾವಳಿ ಪ್ರದೇಶದ ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. 

ಶುಕ್ರವಾರ ಬೆಳಗ್ಗಿನಿಂದಲೇ ಆಂಧ್ರ ಪ್ರದೇಶದಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ವಿದ್ಯುತ್ ವ್ಯತ್ಯಯವಾಗಿದೆ. 

 ಆದರೆ ಮಳೆಯಿಂದ ಇದುವರೆಗೂ ಯಾವುದೇ ಹೆಚ್ಚಿನ ಪ್ರಮಾಣದಲ್ಲಿ  ಹಾನಿ ಸಂಭವಿಸಿಲ್ಲ. ಆದರೆ ಹಲವೆಡೆ ಭೂ ಕುಸಿತದಂತಹ ಅಪಾಯ ಎದುರಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. 

 ವಿಶಾಖಪಟ್ಟಣಂ, ವಿಜಿನಗರಂ,  ಶ್ರೀಕಾಕುಳ, ಆಂಧ್ರ ಪ್ರದೇಶ, ಗಜಪತಿ, ಕುದ್ರಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನರು ಸೂಕ್ತ  ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಶೇ.366ರಷ್ಟು ರಿಟರ್ನ್ಸ್, 2 ಲಕ್ಷ ರೂ.ಗೆ 9.32 ಲಕ್ಷ ರೂ ಬಂಪರ್
ರೇ*ಪ್ ಆರೋಪಿ ಜೊತೆ ಸೇರಿಕೊಂಡು ವ್ಯಕ್ತಿ ವಿರುದ್ಧ ಸುಳ್ಳು ರೇ*ಪ್‌ ಕೇಸ್ ಹಾಕಿದ ಮಹಿಳೆ ಬಂಧನ