10 ದಿನದಲ್ಲಿ 12 ಸಿಂಹಗಳ ಸಾವು : ತನಿಖೆಗೆ ಆದೇಶಿಸಿದ ಸರ್ಕಾರ

By Web DeskFirst Published Sep 21, 2018, 12:09 PM IST
Highlights

ಗಿರ್ ಅರಣ್ಯ ಅರಣ್ಯ ಪ್ರದೇಶದಲ್ಲಿ 10 ದಿನದಲ್ಲಿ 12 ಸಿಂಹಗಳು ಮೃತಪಟ್ಟಿದ್ದು ಈ ಸಂಬಂಧ ಸರ್ಕಾರ ತನಿಖೆಗೆ ಆದೇಶ ನೀಡಿದೆ. 

ರಾಜ್ ಕೋಟ್  :  ಕೇವಲ 10 ದಿನದಲ್ಲಿ  12 ಸಿಂಹಗಳು ಮೃತಪಟ್ಟ ಘಟನೆ ಗುಜರಾತ್  ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. 

ಇಲ್ಲಿ ಸಿಂಹಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕಾದಾಟ ಹೆಚ್ಚಾಗಿದ್ದು ಇದರಿಂದ ಮೃತಪಟ್ಟಿವೆ ಎನ್ನುವ ಶಂಕೆ ವ್ಯಕ್ತವಾಗಿದೆ.  ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶ ನೀಡಿದೆ.  ಗಿರ್ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ 12 ಸಿಂಹಗಳಲ್ಲಿ 6 ಮರಿಗಳಾಗಿವೆ ಎಂದು ಡೆಪ್ಯುಟಿ ಕನ್ಸರ್ವೇಟರ್  ಪಿ. ಪುರುಷೋತ್ತಮ್ ಹೇಳಿದ್ದಾರೆ. 

ಒಂದಕ್ಕೊಂದು ಕಾದಾಡಿಕೊಂಡೆ ಇಲ್ಲಿ ಸಿಂಹಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ. ಕಳೆದ 10 ದಿನಗಳಲ್ಲಿ 12 ಸಿಂಹಗಳು ಸಾವನ್ನ ಪ್ಪಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಬೇರೆ ಬೇರೆ ಪ್ರದೇಶಗಳಲ್ಲಿ ಸಿಂಹಗಳ ಶವ ಸಿಕ್ಕಿದ್ದು  2 ಸಿಂಹಗಳ ಮೃತದೇಹ ಈಗಾಗಲೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು  ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಅಲ್ಲದೇ ಈಗಾಗಲೇ ಸಿಂಹಗಳ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು , ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. 

ಈಗಾಗಲೇ ರಾಜ್ಯ ಸರ್ಕಾರ ಸಿಂಹಗಳ ಸಾವಿನ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದು , ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್  ಗುಪ್ತಾ ಹೇಳಿದ್ದಾರೆ. 

click me!