
ಬೆಂಗಳೂರು(ಆ.05): ಇಲ್ಲಿಯವರೆಗೂ ಮಾಡದ ಐಟಿ ದಾಳಿ ಈಗೇಕೆ? ಇದು ದ್ವೇಷದ ರಾಜಕೀಯ ದಾಳಿ ಅನ್ನೋದು ನೋಡಿದರೆ ಗೊತ್ತಾಗಲ್ಲವೇ? ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಯ ಹಿನ್ನಲೆಯಲ್ಲಿ ಹೀಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವ ರಮೇಶ್ಕುಮಾರ್.
ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೆ ಪ್ಯಾಲೇಸ್ ಗ್ರೌಂಡ್ನಲ್ಲಿ ಅಸಹ್ಯ ಎನ್ನುವಷ್ಟು ನಡೆಯುತ್ತಲ್ಲ ಅದೆಲ್ಲ ಐಟಿ ಇಲಾಖೆಯವರ ಕಣ್ಣಿಗೆ ಕಾಣಲ್ವಾ? ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಯ್ಕೆ ಮಾಡಿ ಮಾಡಿ ದಾಳಿ ಮಾಡಿದರೆ ಐಟಿ ಇಲಾಖೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಆದದ್ದಕ್ಕೆ ಇವೆಲ್ಲವನ್ನೂ ತಡೆಕೊಂಡಿದ್ದಾರೆ, ಅವರು ಈ ಸವಾಲು ಎದುರಿಸಿ ಹೊರಬರ್ತಾರೆ, ಆದರೆ ನಮ್ಮಂತವರ ಮೇಲಾದರೆ ನಮ್ಮ ಕತೆ ಮುಗಿದೇ ಹೋಯ್ತು ಅಂತಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಐಟಿ ಇಲಾಖೆಯ ಹೀಗೆ ನಿರ್ದಿಷ್ಟ ದಾಳಿಗಳ ಮಾಡುವುದರಿಂದ ಜನಮಾನಸದಲ್ಲಿ ತನ್ನ ವಿಶ್ವಾಸ ನಂಬಿಕೆ ಕಳೆದುಕೊಳ್ಳುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.