
ಬೆಂಗಳೂರು(ಮೇ.18): ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ. ಎಸ್ ಆಸ್ಪತ್ರೆಯಲ್ಲಿ ಹಿರಿಯ ನಿರ್ದೇಶಕಿ ಪಾರ್ವತಮ್ಮ ರಾಜ್'ಕುಮಾರ್'ಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಇವರ ಆರೋಗ್ಯದ ಕುರಿತಾಗಿ ಹಲವಾರು ಊಹಾಪೋಹಗಳು ಹರಿದಾಡುತ್ತಿರುವುದರಿಂದ ಸುದ್ದಿಗೋಷ್ಟಿಯನ್ನು ಆಯೋಜಿಸಿದ ರಾಜ್ ಪುತ್ರರು 'ಪಾರ್ವತಮ್ಮ ರಾಜ್'ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ. ಆದರೆ ಅಭಿಮಾನಿಗಳು ಆತಂಕಪಡಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪಾರ್ವತಮ್ಮರವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ 'ಪಾರ್ವತಮ್ಮ ಅವರನ್ನು ವೆಂಟಿಲೇಟರ್ ಮೇಲೆ ಹಾಕಿರುವುದರಿಂದ ಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಆದರೂ ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಉಸಿರಾಟಕ್ಕೆ ತೊಂದರೆಯಾಗುತ್ತಿರುವುದರಿಂದ ಮೆಕ್ಯಾನಿಕಲ್ ವೆಂಟಿಲೇಟರ್ ಮೇಲೆ ಇರಿಸಿದ್ದೇವೆ. ಕಿಡ್ನಿ ವೈಫಲ್ಯ ಕೂಡಾ ಆಗಿದೆ, ಆದರೆ ಮುಂದಿನ ಸ್ಥತಿಯನ್ನು ನೋಡಿ ನಾವು ಡಯಾಲಿಸಿಸ್ ಮಾಡುವ ಯೋಚನೆ ಇದೆ' ಎಂದಿದ್ದಾರೆ.
ಇನ್ನು ಅಮ್ಮನ ಆರೋಗ್ಯದ ಕುರಿತಾಗಿ ಮಾತನಾಡಿರುವ ಶಿವಣ್ಣ 'ಯಾರೇ ಆಗಲಿ ವೆಂಟಿಲೇಟರ್ ಮೇಲಿದ್ದಾರೆ ಎಂದಾಗ ಗಾಬರಿಗೊಳ್ಳುವುದು ಸಹಜ. ಆದರೆ ಯಾರೂ ತಪ್ಪು ಸುದ್ದಿಯನ್ನು ಹಬ್ಬಿಸಬೇಡಿ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಅಲ್ಲದೇ ನಿನ್ನೆಗಿಂತ ಇಂದು ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಹೀಗಾಗಿ ಅಭಿಮಾನಿಗಳು ಆತಂಕಪಡಬೇಕಾದ ಅಗತ್ಯವಿಲ್ಲ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.