
ಬೆಂಗಳೂರು (ಮಾ. 06): ಉತ್ತರ ಪ್ರದೇಶದ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಆದಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಪತ್ರಿಕೆಗಳು, ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ ರಾಜ್ಯದ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಎಚ್’ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಈದ್ಗಾ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಯಾಕೆ ಚಕಾರ ಎತ್ತುತ್ತಿಲ್ಲ? ಯೋಗಿ, ಭೋಗಿಗಳ ಭಾಷಣದಿಂದ ಇಲ್ಲಿನ ಸಮಸ್ಯೆ ಬಗೆಹರಿಯದು. ಬಿಬಿಎಂಪಿ ಅಧಿಕಾರಕ್ಕೆ ಜೆಡಿಎಸ್ ಮನೆ ಬಾಗಿಲಿಗೆ ಬಂದವರು ಯಾರು? ನಂಜನಗೂಡು ಉಪಚುನಾವಣೆಗೆ ಬೆಂಬಲ ಕೋರಿದ್ದು ಯಾರು? ಸಿದ್ದರಾಮಯ್ಯಗೆ ಅಧಿಕಾರದ, ಹಣದ ಮದ ಇದೆ. ಬನ್ನಿ ಚುನಾವಣೆಗೆ ಅಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡಬೇಡಿ. ಮೈಸೂರಿಗೆ ಬಂದಾಗ ನಿಮ್ಮ ಬಗ್ಗೆ ವಿವರವಾಗಿ ಮಾತನಾಡುತ್ತೇನೆ ಎಂದು ಎಚ್ಡಿಕೆ ಕಿಡಿ ಕಾರಿದ್ದಾರೆ.
ನಾವು ಅಧಿಕಾರಕ್ಕೆ ಬರುತ್ತೇವೆ. ನೀವು ಮಾನಸಿಕವಾಗಿ ಸಿದ್ದರಾಗಿ. ಶಾಸಕ ನೈಸ್ ಉದ್ಯಮಿ ಅಶೋಕ ಖೈಣಿ ಕಾಂಗ್ರೆಸ್ ಸೇರಿರುವ ಬಗ್ಗೆ ಕಾಂಗ್ರೇಸ್’ನಲ್ಲಿ ವಿರೋಧವಿದೆ. ಈ ಸರ್ಕಾರದ ನಿಲುವು ಗೊತ್ತಾಗಲಿದೆ. ಅಶೋಕ ಖೈಣಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ಎಚ್’ಡಿಕೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.