
ಬೆಂಗಳೂರು (ಫೆ.24): ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲಿಯೂ ಸಿಎಂ ಯಾರಾಗಬಹುದೆಂಬ ಚರ್ಚೆ ಜೋರಾಗಿದೆ. ರಾಜಕೀಯದಲ್ಲಿರುವ ಮುತ್ಸದ್ಧಿ ನಾಯಕರೊಬ್ಬರು ಮುಂದಿನ ಸಿಎಂ ಇವರೇ ಎಂದು ಭವಿಷ್ಯ ನುಡಿದಿದ್ದಾರೆ.
ಎಚ್ಡಿಕೆಗೆ ಸಿಎಂ ಹುದ್ದೆ ಭಾಗ್ಯ..!
ಈ ಬಾರಿ ಯಾರು ಏನೇ ಮಾಡಿದರೂ 2018ಕ್ಕೆ ಎಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗೋದು. ಎಚ್’ಡಿಕೆ ಕುಂಡಲಿಯಲ್ಲಿದೆಯಂತೆ ಸಿಎಂ ಹುದ್ದೆ ಭಾಗ್ಯವಿದೆ. ನಾನೇ ಮನಸ್ಸು ಮಾಡಿದರೂ ಸಿಎಂ ಹುದ್ದೆ ಮಿಸ್ ಆಗಲ್ಲ ಎಂದು ರಾಜಕೀಯ ಮುತ್ಸದ್ಧಿ ಎಚ್. ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಶಾಸಕರ ಜತೆ ಮಾತನಾಡುತ್ತಾ '2018ರ ಈ ವರ್ಷದಲ್ಲಿ ಕುಮಾರಸ್ವಾಮಿಗೆ ಸಿಎಂ ಹುದ್ದೆ ಬ್ರಹ್ಮಲಿಖಿತ. ರಾಜಕೀಯ ಇತಿಹಾಸದಲ್ಲಿ ನನ್ನ ಮಾತು ಸುಳ್ಳಾಗಿಲ್ಲ ಎಂದಿದ್ದಾರೆ. ಈ ಚುನಾವಣೆಯಲ್ಲಿ ನೀವು ಗೆದ್ದರೆ ನಿಮಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಜೆಡಿಎಸ್ ಪಕ್ಷದ ಪ್ರಭಾವಿ, ಜನಪ್ರಿಯ ಶಾಸಕರಿಗೆ ಗೌಡರು ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬರುತ್ತೆ ನೀವು ಸಚಿವರಾಗ್ತೀರೆಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.