ನನ್ನ ಸೊಂಟ ಸರಿಯಿದೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ತೋರಿಸಿಕೊಟ್ಟ ಗೌಡರು

Published : Dec 05, 2017, 11:37 PM ISTUpdated : Apr 11, 2018, 01:11 PM IST
ನನ್ನ ಸೊಂಟ ಸರಿಯಿದೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ತೋರಿಸಿಕೊಟ್ಟ ಗೌಡರು

ಸಾರಾಂಶ

ಜೆಡಿಎಸ್ ಎಲ್ಲಿದೆ? ಸತ್ತು ಹೋಯ್ತು ಅಂತ ಮುಖ್ಯಮಂತ್ರಿ ಹೇಳ್ತಾರೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕೆ ಬೇಡವೇ ಎಂಬ ನಿರ್ಧಾರ ಮಾಡುವವರು ಜನಗಳು.

ತುಮಕೂರು(ಡಿ.05): ‘ದೇವೇಗೌಡರ ಸೊಂಟ ಸರಿಯಿದೆ ಎಂದು ತೋರಿಸಲು ಎರಡು ಗಂಟೆಗಳ ಕಾಲ ರಾಲಿಯಲ್ಲಿ ನಿಂತು ಕೊಂಡು ಬಂದೆ.’ ದೇವೇಗೌಡರಿಗೆ ವಯಸ್ಸಾಗಿರುವುದರಿಂದ ನೆಟ್ಟಗೆ ನಿಂತುಕೊಳ್ಳಲೂ ಕಷ್ಟವಾಗುತ್ತಿದೆ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಟಾಂಗ್ ನೀಡಿದ ಪರಿಯಿದು.

ಕೊರಟಗೆರೆಯಲ್ಲಿ ನಡೆದ ಜೆಡಿಎಸ್ ರಾಲಿಯಲ್ಲಿ ಎರಡು ಗಂಟೆ ನಿಂತುಕೊಂಡೇ ಬಂದ ದೇವೇಗೌಡರು ಬಳಿಕ ನಡೆದ ಸಮಾರಂಭದಲ್ಲಿ ಒಂದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಹೆಬ್ಬಯಕೆಯಿದೆಯೇ ಹೊರತು ನನ್ನ ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಆಸೆಯಿಲ್ಲ. ಕುಮಾರಸ್ವಾಮಿಗೆ ಎರಡು ಬಾರಿ ಆಪರೇಷನ್ ಆಗಿರುವುದರಿಂದ ಯುವಕರು ಕುಮಾರಣ್ಣ ಬಂದಾಗ ಪಟಾಕಿ ಹೊಡೆಯಬೇಡಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಮನವಿ ಮಾಡಿದರು.

ಜೆಡಿಎಸ್ ಎಲ್ಲಿದೆ? ಸತ್ತು ಹೋಯ್ತು ಅಂತ ಮುಖ್ಯಮಂತ್ರಿ ಹೇಳ್ತಾರೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕೆ ಬೇಡವೇ ಎಂಬ ನಿರ್ಧಾರ ಮಾಡುವವರು ಜನಗಳು. ಜೆಡಿಎಸ್ ದೇವೇಗೌಡರ ಕುಟುಂಬದ ಆಸ್ತಿಯಲ್ಲ ಎಂದ ಅವರು, ಪಕ್ಷದ ಕಟ್ಟಡ ಹೋದಾಗ ಒಂಟಿಯಾಗಿ ಕುಳಿತು ಕಣ್ಣೀರು ಹಾಕಿದ್ದೇನೆ ಎಂದು ಭಾವುಕರಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ