ಪ್ರಧಾನಿಯಾಗಿದ್ದಾಗಿನ ಸಣ್ಣ ರಹಸ್ಯ ಬಿಚ್ಚಿಟ್ಟ ಗೌಡರು, ಕುಮಾರನ ಬಗ್ಗೆಯೂ ಹೇಳಿದರು

Published : Nov 11, 2016, 02:45 PM ISTUpdated : Apr 11, 2018, 12:43 PM IST
ಪ್ರಧಾನಿಯಾಗಿದ್ದಾಗಿನ  ಸಣ್ಣ ರಹಸ್ಯ ಬಿಚ್ಚಿಟ್ಟ ಗೌಡರು, ಕುಮಾರನ ಬಗ್ಗೆಯೂ ಹೇಳಿದರು

ಸಾರಾಂಶ

ಎರಡು ರಾಜಕೀಯ ಪಕ್ಷಗಳನ್ನು ಹತ್ತಿರದಿಂದ ನೊಡಿದ್ದೇನೆ, ಆ ಪಕ್ಷಗಳಿಂದ ನನಗೆ ನೋವು ಕೂಡ ಆಗಿದೆ. 

ಚಿಂತಾಮಣಿ(ನ.11): ದೇವೇಗೌಡರು ಪ್ರಧಾನಿಯಾಗಿ ಆಳ್ವಿಕೆ ನಡೆಸಿ ಈಗಾಗಲೇ 20 ವರ್ಷ ಕಳೆದಿದೆ. ತಾವು ಪ್ರಧಾನಿಯಾದಾಗಿನ ಕೆಲವು ಅನುಭವಗಳನ್ನು ಆಗಾಗ ಹೇಳುತ್ತಿರುತ್ತಾರೆ.  ಈಗಲು ಸಹ ಒಂದು  ಸಣ್ಣ ರಹಸ್ಯ ಬಿಚ್ಚಿಟ್ಟಿದ್ದಾರೆ.

ಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭದ್ರತೆಯ ದೃಷ್ಟಿಯಿಂದ ತೆರೆದ ಜೀಪಿನಲ್ಲಿ ಹೋಗಬಾರದೆಂದು ಸರ್ಕಾರದ ಗೂಡಚರ್ಯೆ, ಗುಪ್ತಚರ ಇಲಾಖೆಗಳು ಖಡಾಖಂಡಿತವಾಗಿ ಸೂಚಿಸಿದ್ದರಂತೆ. ಆದರೆ ಗುಪ್ತಚರ ಇಲಾಖೆಯ ಸೂಚನೆಗೆ ಬಗ್ಗದೆ ತೆರೆದ ಜೀಪಿನಲ್ಲಿ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಲು ಈ ರೀತಿ ಮಾಡುತ್ತಿದೆ' ಎಂದು ತಿಳಿಸಿದ್ದಾರೆ.

ಹೆಚ್'ಡಿಕೆ ಸಿಎಂ ಆಗಬೇಕೆಂಬ ವ್ಯಾಮೋಹವಿಲ್ಲ 

ನನಗೆ ಕುಮಾರಸ್ವಾಮಿ ಸಿಎಂ ಆಗಬೆಕೆಂಬ ವ್ಯಾಮೋಹವಿಲ್ಲಾ, ಪಕ್ಷ ಉಳಿಯಬೇಕೆಂಬ ವ್ಯಾಮೋಹವಿದೆ. ನೀವು ನಮಗೆ ಶಕ್ತಿ ನೀಡಿ. ಎಲ್ಲಾ ಸಾಲಗಳು ಮನ್ನಾ ಮಾಡುತ್ತೇವೆ. ನನ್ನ ಅದೃಷ್ಟವೊ ದುರಾದೃಷ್ಟವೋ ಗೊತ್ತಿಲ್ಲಾ, ರಾಜಕೀಯದಲ್ಲಿ ಇನ್ನು ಮೂರು ವರ್ಷ  ಸಂಸದನಾಗಿಯೂ ಇರ್ತಿನಿ.                     

ಎರಡು ರಾಜಕೀಯ ಪಕ್ಷಗಳನ್ನು ಹತ್ತಿರದಿಂದ ನೊಡಿದ್ದೇನೆ, ಆ ಪಕ್ಷಗಳಿಂದ ನನಗೆ ನೋವು ಕೂಡ ಆಗಿದೆ.  ಶೀಘ್ರದಲ್ಲೆ ಕಾವೇರಿ ವಿಚಾರದ ಬಗ್ಗೆ ತೀರ್ಪು ಬರಲಿದೆ. ಮುಸ್ಲಿಂಮರ ಬಗ್ಗೆ ಹಗುರವಾಗಿ ಮಾತನಾಡ ಬಾರದೆಂದು  ಬಿಜೆಪಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!