ಪ್ರಜ್ವಲ್, ನಿಖಿಲ್ ಚುನಾವಣೆ ಸ್ಪರ್ಧೆ ವಿಚಾರ : ಗೊಂದಲ ಮೂಡಿಸಿದ ಗೌಡರ ಹೇಳಿಕೆ

Published : Nov 08, 2017, 06:04 PM ISTUpdated : Apr 11, 2018, 12:50 PM IST
ಪ್ರಜ್ವಲ್, ನಿಖಿಲ್ ಚುನಾವಣೆ ಸ್ಪರ್ಧೆ ವಿಚಾರ : ಗೊಂದಲ ಮೂಡಿಸಿದ ಗೌಡರ ಹೇಳಿಕೆ

ಸಾರಾಂಶ

ನಾನು ಸದ್ಯಕ್ಕೆ ಯಾವ ಸಿಗ್ನಲ್ ಕೊಟ್ಟಿಲ್ಲ, ತೀರ್ಮಾನ ಮಾಡಲು ಜನ ಇದ್ದಾರೆ.

ಬೆಂಗಳೂರು(ನ.08): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ  ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಹೇಳಿಕೆ ಗೊಂದಲ ಮೂಡಿಸಿದೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದ್ಯಕ್ಕೆ ಯಾವ ಸಿಗ್ನಲ್ ಕೊಟ್ಟಿಲ್ಲ, ತೀರ್ಮಾನ ಮಾಡಲು ಜನ ಇದ್ದಾರೆ. ನಾನು ಪ್ರಧಾನಿ ಆಗುತ್ತೇನೆ ಅಂದುಕೊಂಡಿರಲಿಲ್ಲ ಹಾಗೇಯೇ ನಿಖಿಲ್ - ಪ್ರಜ್ವಲ್ ಏನಾಗಬೇಕು ಅನ್ನೋದನ್ನು ಜನ ತೀರ್ಮಾನಿಸ್ತಾರೆ. ಮೊನ್ನೆ ಹಾಸನದ ಹರದನಹಳ್ಳಿಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರ ಪತ್ನಿ ಭಾವನಿ ರೇವಣ್ಣ ಅವರು  ಪ್ರಜ್ವಲ್ ಸ್ಪರ್ಧೆಗೆ ಗೌಡರು ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ದೇವೇಗೌಡರು ಇಂದು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಈ ಹೇಳಿಕೆ ಪರೋಕ್ಷವಾಗಿ ಇಬ್ಬರನ್ನು ರಾಜಕೀಯದಲ್ಲಿ ಬೆಳಸುವ ಸೂಚನೆ ನೀಡಿದ್ದಾರೆ.

ಚೆಲುವರಾಯ ಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಗೌಡರು

ಕನಕಪುರ'ದಲ್ಲಿ ಈಗಲೂ ನಾನು ಹೋದರೂ ಜನ ಸೇರಿಸುವ ಶಕ್ತಿ ಇದೆ. ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದವು. ಅವೆಲ್ಲವನ್ನೂ ಇವತ್ತಿನ ಸಭೆಯಲ್ಲಿ ಬಗೆಹರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಕಪುರದಿಂದ ಒಂದು ಸ್ಥಾನ ಗೆಲ್ಲಿಸಿಕೊಡುವ ವಿಶ್ವಾಸ ವನ್ನು ಕಾರ್ಯಕರ್ತರು ನೀಡಿದ್ದಾರೆ' ಎಂದು ಚೆಲುವರಾಯ ಸ್ವಾಮಿ ಹೇಳಿಕೆಗೆ ದೇವೇಗೌಡರು ಟಾಂಗ್ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು