ಎಚ್’ಡಿಕೆಗೆ ಕಿಚ್ಚನ ಔತಣಕೂಟ : ಸ್ವತಃ ಅಡುಗೆ ಮಾಡಿ ಉಣಬಡಿಸಿದ ನಟ

Published : Dec 18, 2017, 11:49 AM ISTUpdated : Apr 11, 2018, 01:09 PM IST
ಎಚ್’ಡಿಕೆಗೆ ಕಿಚ್ಚನ ಔತಣಕೂಟ : ಸ್ವತಃ ಅಡುಗೆ ಮಾಡಿ ಉಣಬಡಿಸಿದ ನಟ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮ ದಿನದ ಪ್ರಯುಕ್ತ ಎಚ್ಡಿಕೆ ಅವರನ್ನು ಮನೆಗೆ ಆಹ್ವಾನಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ವತಃ ಅಡುಗೆ ಮಾಡಿ ಉಣ ಬಡಿಸಿದ್ದಾರೆ.

ಬೆಂಗಳೂರು (ಡಿ.18): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮ ದಿನದ ಪ್ರಯುಕ್ತ ಎಚ್ಡಿಕೆ ಅವರನ್ನು ಮನೆಗೆ ಆಹ್ವಾನಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ವತಃ ಅಡುಗೆ ಮಾಡಿ ಉಣ ಬಡಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಸುದೀಪ್ ಮನೆಗೆ ಬಂದ ಕುಮಾರಸ್ವಾಮಿ ಅವರು ಸುಮಾರು ಎರಡು ತಾಸು ಸುದೀಪ್ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಈ ವೇಳೆ ಸುದೀಪ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಚರ್ಚೆ ನಡುವೆ ಅಡುಗೆ ಸಿದ್ಧಪಡಿಸಿ ಇಬ್ಬರು ಒಟ್ಟಿಗೇ ಊಟ ಸೇವಿಸಿದರು.

ಕುಮಾರಸ್ವಾಮಿ ಅವರ ಹುಟ್ಟು ಹಬ್ಬಕ್ಕೆ ಶನಿವಾರ ಶುಭ ಕೋರಿದ್ದ ಸುದೀಪ್, ಊಟಕ್ಕಾಗಿ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಓಗೊಟ್ಟಿದ್ದ ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಸುದೀಪ್ ಮನೆಗೆ ಭೇಟಿ ನೀಡಿದರು.

ಕುಮಾರಸ್ವಾಮಿ ಅವರನ್ನು ಸಂತೋಷದಿಂದ ಸ್ವಾಗತಿಸಿದ ಸುದೀಪ್, ಸ್ವತಃ ಅಡುಗೆ ಸಿದ್ಧಪಡಿಸಿ ಬಡಿಸಿದರು. ಜೆಡಿಎಸ್ ವಿಧಾನಪರಿಷತ್ ಸದಸ್ಯರೂ ಆಗಿರುವ ಚಿತ್ರ ನಿರ್ಮಾಪಕ ಸಿ.ಆರ್. ಮನೋಹರ್ ಕೂಡ ಈ ವೇಳೆ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಳುತ್ತಲೇ ತನ್ನ 11 ವರ್ಷಗಳ ಅಂತರ್ಜಾತಿ ಪ್ರೀತಿಯ ಹೇಳಿಕೊಂಡ ಮಗಳಿಗೆ ತಂದೆ ಹೇಳಿದ್ದೇನು? : ವೀಡಿಯೋ
ಗೃಹಲಕ್ಷ್ಮಿ ಹಣ ಬಾಕಿ ಗದ್ದಲ: ತಪ್ಪೊಪ್ಪಿಕೊಂಡ ಸಚಿವೆ, ವಿಪಕ್ಷಗಳು ಆಕ್ರೋಶ, ಪ್ರಿಯಾಂಕ್ ಖರ್ಗೆಗೆ ಸ್ಫೀಕರ್ ತರಾಟೆ!