'2020ರಲ್ಲಿ ಎಚ್‌.ಡಿ.ಕುಮಾರಸ್ವಾಮಿಯೇ ಮತ್ತೆ ಮುಖ್ಯಮಂತ್ರಿ'

By Web DeskFirst Published Jul 24, 2019, 3:09 PM IST
Highlights

ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿ ಸಿಎಂ ಹುದ್ದೆಗೆ ಏರಿದ್ದ  ಎಚ್.ಡಿ.ಕುಮಾಸ್ವಾಮಿ ಸದ್ಯ ಅಧಿಕಾರದಿಂದ 14 ತಿಂಗಳ ಬಳಿಕ ಕೆಳಕ್ಕೆ ಇಳಿದಿದ್ದಾರೆ. ಇದೀಗ ಎಚ್.ಡಿ.ಕುಮಾರಸ್ವಾಮಿ  ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು [ಜು.24]: ಈಗಷ್ಟೇ ರಾಜ್ಯದಲ್ಲಿ ರಾಜಕೀಯ ನಾಟಕ ಮುಗಿದಿದೆ. ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತ. ಅವರು ಅಧಿಕಾರಕ್ಕೆ ಬಂದರೂ ಅಧಿಕಾರದಲ್ಲಿ ಇರುವುದು ಕೇವಲ 8 ತಿಂಗಳು ಎಂದು ಶ್ರೀಕ್ಷೇತ್ರ ಮೈಲಾರದ ಕಾರಣೀಕ ಭವಿಷ್ಯ ನುಡಿದಿದೆ. ಅಷ್ಟೇ ಅಲ್ಲ ಮತ್ತೊಬ್ಬ ಜ್ಯೋತಿಷಿ ಮುಂದಿನ ವರ್ಷ ಮತ್ತೆ ಕುಮಾರಸ್ವಾಮಿಯೇ ಕರ್ನಾಟಕದ ಮುಖ್ಯಮಂತ್ರಿ ಎಂದೂ ಹೇಳಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

2020ರಲ್ಲಿ ಮತ್ತೆ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಇಸ್ಲಾಮಿಕ್ ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಲಿದ್ದಾರೆ, ಎಂದು ಇಸ್ಲಾಮಿಕ್ ಜ್ಯೋತಿಷಿ ಮೊಹಮ್ಮದ್ ರಹೀಮುಲ್ಲಾ ಖಾನ್ ನಿಯಾಜಿ ನಿಖರವಾಗಿ ಹೇಳಿದ್ದಾರೆ. ಆ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸಂತೋಷವಾಗುವಂಥ ಮಾತು ಹೇಳಿದ್ದಾರೆ.

ಹೈದರಾಬಾದ್ ಮೂಲದ ನಿಯಾಜಿ, 'ಕುಮಾರಸ್ವಾಮಿ ಅವರ ಹೆಸರಿನ ಆಧಾರದಲ್ಲಿ ಭವಿಷ್ಯ ನುಡಿಯುತ್ತಿದ್ದೇನೆ. ಅವರು ಮತ್ತೆ ಸಿಎಂ ಆಗೋದು ಪಕ್ಕಾ. ಮತ್ತೆ JDS ಅಧಿಕಾರಕ್ಕೆ ಏರಲಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದು ಬಹುಮತವೂ ಸಿಗಲಿದೆ,' ಎಂದೂ ಹೇಳಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜಕೀಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

2019ರ ಲೋಕಸಭಾ ಚುನಾವಣೆ ವೇಳೆಯೂ ತಾವು ನುಡಿದ ಭವಿಷ್ಯ ನಿಜವಾಗಿದೆ. ಮೋದಿ 300 ಸೀಟು ಪಡೆಯುವುದಾಗಿ ಹೇಳಿದ್ದೆ, ಎಂದೂ ಈ ಜ್ಯೋತಿಷಿ ಹೇಳಿಕೊಂಡಿದ್ದಾರೆ. 

ಆದರೆ, ಮತ್ತೊಮ್ಮೆ ಚುನಾವಣೆ ನಡೆದು, ಜೆಡಿಎಸ್ ಬಹುಮತ ಪಡೆಯುವಷ್ಟು ಪಕ್ಷ ಬಲವಾಗಿ ಸಂಘಟನೆಯಾಗುತ್ತಿದೆಯಾ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. 

click me!