
ನಾಗಮಂಗಲ: ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜೆಡಿಎಸ್ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಸ್ವಕ್ಷೇತ್ರದಲ್ಲಿ ಜೆಡಿಎಸ್ ತನ್ನ ಬಲ ಪ್ರದರ್ಶಿಸಿತು.
ಪಟ್ಟಣದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನಡೆದ ‘ಕುಮಾರಪರ್ವ’ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ದೇವೇಗೌಡ, ತಾಲೂಕಿನಲ್ಲಿ ಗುತ್ತಿಗೆ ಮಾಡಿಕೊಂಡಿದ್ದ ಸಹೋದರರಿಬ್ಬರು ಬಿಲ್‌ಗಾಗಿ ನನ್ನೆದಿರುವ ನಿಲ್ಲುತ್ತಿದ್ದರು. ಇಂತಹವರನ್ನು ಕರೆತಂದು ಮೂರು ಬಾರಿ ಶಾಸಕ, ಸಂಸದ, ಮಂತ್ರಿಯನ್ನಾಗಿ ಮಾಡಿದೆವು. ಆದರೆ, ನೀವು ಸಂಸದ ಚುನಾವಣೆಗೆ ನಿಂತಾಗ ಪಾಂಡವಪುರ ತಾಲೂಕಿನಿಂದ ಪುಟ್ಟರಾಜು 10 ಸಾವಿರ ಅಧಿಕ ಮತ ಕೊಡಿಸಿದರು. ಆದರೆ ಪುಟ್ಟರಾಜು ಚುನಾವಣೆಗೆ ನಿಂತಾಗ ನಿಮ್ಮ ಕ್ಷೇತ್ರದಲ್ಲಿ 13 ಸಾವಿರ ಮತಗಳ ಹಿನ್ನಡೆ ಕೊಟ್ಟು, ಅವರನ್ನು ರಾಜಕೀಯವಾಗಿ
ತುಳಿಯುವ ಕೆಲಸ ಮಾಡಿದ್ದೀರಿ ಎಂದು ಚಲುವರಾಯ ಸ್ವಾಮಿಯನ್ನು ಗೌಡರು ತರಾಟೆಗೆ ತೆಗೆದುಕೊಂಡರು.
‘ಕುಮಾರಣ್ಣನ ಆರೋಗ್ಯ ಕೆಟ್ಟುಹೋ ಯಿತು. ಅವರಪ್ಪನಿಗೆ ವಯಸ್ಸಾಯಿತು. ಇನ್ನು ಮುಂದೆ ನಾನೇ
ರಾಜ, ಮಾಗಡಿ ಬಾಲಕೃಷ್ಣನೇ ಮಂತ್ರಿ ಎಂದು ಸಭೆಯಲ್ಲಿ ಕಿಚನ್ ಟಾಕ್ ಮಾಡುತ್ತೀರಿ. ಇಂದು ಕುಮಾರ ಸ್ವಾಮಿಯ ಎದುರಿಗೆ ನಿಂತು ಭುಜ ತಟ್ಟುಲು ಹೊರಟಿ ದ್ದೀರಿ. ನನ್ನ ಕೊನೆ ಉಸಿರು ಇರುವವರೆಗೂ ಇದಕ್ಕೆ ಅವಕಾಶ ನೀಡಲ್ಲ.
ಪಕ್ಷದ ಅಭ್ಯರ್ಥಿ ಸುರೇಶ್ ಗೌಡರನ್ನು ಗೆಲ್ಲಿಸುವ ಸಲುವಾಗಿ ಇನ್ನೂ 2-3 ಬಾರಿ ಕ್ಷೇತ್ರಕ್ಕೆ ಭೇಟಿ ಕೊಡುತ್ತೇನೆ’ ಎಂದರು. ನಮ್ಮ ಪಕ್ಷದಲ್ಲಿ ಉಂಡು, ತಿಂದು, ತೇಗಿ ಬೆಳೆದು ಪಕ್ಷವನ್ನೇ ಸರ್ವನಾಶ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನ ಕನಸು ಈಡೇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.