
ನವದೆಹಲಿ[ಜೂ.12]: ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಇಂಗ್ಲಿಷ್ ಪಾಂಡಿತ್ಯಕ್ಕೆ ತಲೆದೂಗದವರಿಲ್ಲ. ತಮ್ಮ ಇಂಗ್ಲಿಷ್ ಸುಧಾರಿಸಿದ ನಿಮಗೆ ಧನ್ಯವಾದ ಅಂತ ಅದೆಷ್ಟೋ ಜನ ಶಶಿ ತರೂರ್ ಅವರಿಗೆ ಟ್ವಿಟ್ ಮಾಡುತ್ತಲೇ ಇರುತ್ತಾರೆ.
ತರೂರ್ ಸಾಮಾನ್ಯ ಜನರಿಗೆ ತಿಳಿಯದೇ ಇರುವ ಅದೆಷ್ಟೋ ಇಂಗ್ಲಿಷ್ ಶಬ್ದಗಳನ್ನು ತಮ್ಮ ಟ್ವಿಟ್ ನಲ್ಲಿ ಬಳಸುವ ಮೂಲಕ ಆ ಭಾಷೆಯ ಮೇಲೆ ತಮಗಿರುವ ಪಾಂಡಿತ್ಯವನ್ನು ಪ್ರದಶರ್ಶನ ಮಾಡುತ್ತಿರುತ್ತಾರೆ. ಕೆಲವೊಮ್ಮೆ ದೇಶೀಯ ಪದಗಳ ಜೊತೆ ಇಂಗ್ಲಿಷ್ ಸೇರಿಸಿ ಹೊಸ ಪದ ಸೃಷ್ಟಿಸುತ್ತಾರೆ. ತರೂರ್ ಹಾಗೆ ಸೃಷ್ಟಿಸಿದ ಪದಗಳ ಪೈಕಿ ‘ವೆಬ್‌ಕೂಫ್’[ಹಿಂದಿಯ ‘ಬೇವ್‌ಕೂಫ್’ ಎಂಬ ಅರ್ಥ ಕೊಡುವ ಪದ] ಎಂಬ ಪದ ಭಾರೀ ಪ್ರಶಂಸೆ ಗಳಿಸಿತ್ತು.
ಆದರೆ ತಾವೇ ಸೃಷ್ಟಿಸಿದ ಪದ ಇಂದು ಶಶಿ ತರೂರ್ ಅವರನ್ನೇ ಟ್ರೋಲ್ ಮಾಡಲು ಬಳಕೆಯಾಗಿದೆ. ತರೂರ್ ಒಂದು ಟ್ವಿಟ್ ಮಾಡಿದ್ದು, ಅದರಲ್ಲಿ ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ಡಾಕ್ಟರೇಟ್ ಪದವಿಗಾಗಿ ತಿರಸ್ಕರಿಸಿದ್ದ ಪ್ರೋ. ವಿಲಿಯಂ ಹೈನ್ರಿಚ್ ಅವರ ಪತ್ರವೊಂದರ ಫೋಟೋ ಹಾಕಿದ್ದರು. ಪ್ರೋ. ವಿಲಿಯಂ ಅವರು ಐನ್‌ಸ್ಟೀನ್ ಅವರ ಪ್ರಬಂಧವನ್ನು ತಾರ್ಕಿಕವಾಗಿ ಒಪ್ಪಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿದ್ದರು.
ಈ ಪತ್ರದ ಫೋಟೋ ಶೇರ್ ಮಾಡಿದ್ದ ಶಶಿ ತರೂರ್, ಜಗತ್ತು ಕಂಡ ಮಹಾನ್ ವಿಜ್ಞಾನಿ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲತೆ ಕಂಡಿದ್ದರು ಎಂದು ಟ್ವಿಟ್ ಮಾಡಿದ್ದರು. ಆದರೆ ಅಸಲಿಗೆ ಈ ಪತ್ರ ನಕಲಿ ಎಂದು ಸಾಬೀತಾಗಿದ್ದು, ನೆಟಿಜನ್‌ಗಳು ಶಶಿ ತರೂರ್ ಅವರನ್ನು ವೆಬ್‌ಕೂಫ್ ಎಂದು ಟ್ರೋಲ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.