ಬೆಂಗಳೂರು ವಿವಿ ಕುಲಪತಿಯಾಗಿ ಕೆ.ಆರ್.ವೇಣುಗೋಪಾಲ್‌

First Published Jun 12, 2018, 9:30 PM IST
Highlights
  • 14 ತಿಂಗಳ ನಂತರ ಶಾಶ್ವತ ಕುಲಪತಿ
  • 2016 ಫೆಬ್ರವರಿಯಿಂದ ಐವರು ಹಂಗಾಮಿ ಕುಲಪತಿಗಳಿಂದ ಕಾರ್ಯನಿರ್ವಹಣೆ

ಬೆಂಗಳೂರು[ಜೂ.12]: ಹದಿನಾಲ್ಕು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಲಪತಿಗಳನ್ನು ನೇಮಿಸಲಾಗಿದ್ದು ಕೆ.ಆರ್.ವೇಣುಗೋಪಾಲ್‌ ಅವರನ್ನು ರಾಜ್ಯಪಾಲ ವಜುಬಾಯಿವಾಲ ಕುಲಪತಿಗಳಾಗಿ ನೇಮಕ ಮಾಡಿದ್ದಾರೆ. 

2017 ಫೆಬ್ರುವರಿ 6ರಂದು ಬಿ.ತಿಮ್ಮೇಗೌಡ ಅವರು ನಿವೃತ್ತರಾದ ನಂತರ ಅವರಿಂದ ಐವರು ಹಂಗಾಮಿ ಕುಲಪತಿಗಳಾಗಿ ನೇಮಕವಾಗಿದ್ದರು. ಇದೇ ಮಾರ್ಚ್‌ನಲ್ಲಿ ಐದನೇ ಹಂಗಾಮಿ ಕುಲಪತಿಯಾಗಿ ಗಣಿತ ವಿಭಾಗದ ಡೀನ್‌ ಶಿವಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ್ದರು.

ಯಾವುದೇ ವಿವಿಯ ಕುಲಪತಿ ಹುದ್ದೆಯಲ್ಲಿ ಇರುವವರು ನಿವೃತ್ತರಾದಾಗ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿವಿಯ ಹಿರಿಯ ಡೀನ್‌ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಕ ಮಾಡಲಾಗುತ್ತದೆ.

click me!